ರಾಷ್ಟ್ರೀಯ

ಮಟನ್ ಬಿರ್ಯಾನಿಯ ಲಂಚ ಕೇಳಿ ಸಿಕ್ಕಿಬಿದ್ದ ಅಧಿಕಾರಿ!

Pinterest LinkedIn Tumblr


ನಾಸಿಕ್: ಲಂಚದ ರೂಪದಲ್ಲಿ ಮಟನ್ ಬಿರ್ಯಾನಿ ಕೇಳಿದ ಅಧಿಕಾರಿಯೊಬ್ಬ ಭ್ರಷ್ಟಾಚಾರ ನಿಗ್ರಹ ದಳಕ್ಕೆ ರೆಡ್‌ ಹ್ಯಾಡ್ ಆಗಿ ಸಿಕ್ಕಿಬಿದ್ದ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ್ ಜಿಲ್ಲೆಯ ಕೋಪರ್‌ಗಾಂವ್‌ನ ತೆಹ್ಸಿಲ್‌ನಲ್ಲಿ ನಡೆದಿದೆ.

ಉಲ್ಹಾಸ್ ಯಶವಂತ್ ಕಾವಡೆ (57) ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಅಧಿಕಾರಿ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವ್ಯಕ್ತಿಯೊಬ್ಬ ಕೋಪರ್‌ಗಾಂವ್‌ ಪ್ರದೇಶದಲ್ಲಿ ನಿವೇಶನ ಖರೀದಿಸಿದ್ದ. ಅದನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಕಾವಡೆ ಬಳಿ ಅರ್ಜಿ ಸಲ್ಲಿಸಿದ್ದ. ಈ ಕೆಲಸ ಮಾಡಿಕೊಡಲು ಕಾವಡೆ ಲಂಚದ ಬೇಡಿಕೆ ಇಟ್ಟಿದ್ದು, 15 ಸಾವಿರ ರೂಪಾಯಿ ನಗದು ಹಾಗೂ 2 ಕೆ.ಜಿ. ಮಟನ್ ಬಿರ್ಯಾನಿಗೆ ಡಿಮ್ಯಾಂಡ್ ಮಾಡಿದ್ದ ಎಂದು ತಿಳಿದುಬಂದಿದೆ.

ಆತನ ಬೇಡಿಕೆಗೆ ಒಪ್ಪಿದ ಅರ್ಜಿದಾರ ತಕ್ಷಣವೇ ಒಂದು ಸಾವಿರ ರೂಪಾಯಿ ಮುಂಗಡ ಹಣ ನೀಡಿದ್ದು, ಬಾಕಿ 14 ಸಾವಿರ ರೂಪಾಯಿ ಕೊಂಡು ಬರುವುದಾಗಿ ಹೇಳಿ ಹೋಗಿದ್ದ. ಈ ಕುರಿತು ಮಾಹಿತಿ ಪಡೆದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾವಡೆ 14 ಸಾವಿರ ರೂಪಾಯಿ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿಯಲ್ಲಿ ಕಾವಡೆ ವಿರುದ್ಧ ಕೋಪರ್‌ಗಾಂವ್‌ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.