ರಾಷ್ಟ್ರೀಯ

ವಾಟ್ಸಪ್ ಡಿಜಿಟಲ್ ಪೇಮೆಂಟ್ ಹಣ ಸ್ವೀಕರಿಸುವುದು/ವರ್ಗಾವಣೆ?

Pinterest LinkedIn Tumblr


ಹೊಸದಿಲ್ಲಿ: ಫೇಸ್‌ಬುಕ್ ಅಧೀನತೆಯಲ್ಲಿರುವ ವಾಟ್ಸಪ್, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ತಳಹದಿಯಲ್ಲಿ ಡಿಜಿಟಲ್ ಪೇಮೆಂಟ್ ಸೇವೆಯನ್ನು ಆರಂಭಿಸಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.

ವಾಟ್ಸಪ್ ಪೇಮೆಂಟ್ ಸೇವೆಯ ಮೂಖಾಂತರ ಸುಲಭವಾಗಿ ಹಣ ಪಡೆಯುವುದು ಹಾಗೂ ವರ್ಗಾಯಿಸಬಹುದಾಗಿದೆ.

ಥರ್ಡ್ ಪಾರ್ಟಿ ಜತೆಗಿನ ಡೇಟಾ ಶೇರಿಂಗ್ ಸಂಬಂಧ ಉಂಟಾಗಿರುವ ಕಾನೂನು ತೊಡುಕಗಳಿಂದಾಗಿ ವಾಟ್ಸಪ್ ಪೇಮೆಂಟ್ ಸೇವೆ ವಿಳಂಬಗೊಂಡಿತ್ತು. ಇದೀಗ ಸೇವೆಯನ್ನು ಸಾರ್ವತ್ರಿಕವಾಗಿ ಆರಂಭಿಸಿದೆ ಎಂಬುದು ತಿಳಿದು ಬಂದಿದೆ. ಈ ಸಂಬಂಧ ವಾಟ್ಸಪ್ ಅಧಿಕೃತ ಪ್ರಕಟಣೆಯನ್ನು ಇನ್ನಷ್ಟೇ ಮಾಡಬೇಕಿದೆ.

ಹಣ ಸ್ವೀಕರಿಸುವುದು/ವರ್ಗಾವಣೆ ಹೇಗೆ?

ಸುಲಭವಾದ ವಿಧಾನದ ಮೂಲಕ ಪೇಮೆಂಟ್ ಸೇವೆಯನ್ನು ಮಾಡಬಹುದಾಗಿದೆ. ಇದಕ್ಕಾಗಿ OTP ಬಳಸಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಜತೆ ಲಿಂಕ್ ಮಾಡಬೇಕಾಗುತ್ತದೆ. ಇವಿಷ್ಟು ಮಾಡಿದರೆ ಚಾಟಿಂಗ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ಹಣ ಪಡೆಯಲು ಹಾಗೂ ವರ್ಗಾವಣೆ ಮಾಡಲು ಸಾಧ್ಯವಾಗಲಿದೆ. QR ಕೋಡ್ ಬಳಕೆಯ ಮೂಲಕ ಹಣ ವರ್ಗಾಯಿಸಬಹುದು.

Comments are closed.