ಕರ್ನಾಟಕ

ಯೋಗೀಶ್ವರ್​, ಬಿಜೆಪಿಗೆ ಪ್ರವೇಶ ನಿರ್ಬಂಧಿಸಿ ಚನ್ನಪಟ್ಟಣದಲ್ಲಿ ಮನೆಗಳ ಮುಂದೆ ಬೋರ್ಡ್​

Pinterest LinkedIn Tumblr

ಚನ್ನಪಟ್ಟಣ (ರಾಮನಗರ): ಬಿಜೆಪಿ ಸೇರಿ ಚುನಾವಣೆ ಕಣಕ್ಕೆ ಧುಮಕಿರುವ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೀಶ್ವರ್​ ವಿರುದ್ಧ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. “ಬಿಜೆಪಿ ಮತ್ತು ಅದರ ಕಾರ್ಯಕರಿಗೆ ಕಡ್ಡಾಯವಾಗಿ ನಮ್ಮ ಬಡಾವಣೆ ಪ್ರವೇಶ ನಿರ್ಬಂಧಿಸಲಾಗಿದೆ,” ಎಂಬ ಫಲಕಗಳು ಚನ್ನಪಟ್ಟಣದ ಹಲವು ಮನೆಗಳ ಮೇಲೆ ರಾರಾಜಿಸುತ್ತಿವೆ.

ಚನ್ನಪಟ್ಟಣದ ಇಸ್ಲಾಂಪುರ ಮೊಹಲ್ಲಾದ ಹಲವು ಮನೆಗಳ ಮೇಲೆ ಇಂಥ ಫಲಕಗಳನ್ನು ಹಾಕಲಾಗಿದೆ. ಸಿ.ಪಿ ಯೋಗೀಶ್ವರ್​ ಪಕ್ಷಾಂತರ ಮಾಡಿ ನಮ್ಮ ಕ್ಷೇತ್ರದ ಮತದಾರರಿಗೆ ವಂಚನೆ ಮಾಡುತ್ತಿದ್ದಾರೆ. 20 ವರ್ಷಗಳಿಂದ ಸ್ಪರ್ಧೆ ಮಾಡುತ್ತಿರುವ ಅವರಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ನಾನು ನೀರಾವರಿ ಹರಿಕಾರ ಎಂದು ಹೇಳಿಕೊಳ್ಳುವ, ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ ಎನ್ನುತ್ತಿರುವ ಯೋಗೀಶ್ವರ್​ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹೀಗಾಗಿ ಸಿ.ಪಿ. ಯೋಗೀಶ್ವರ್​ಗೆ ತಕ್ಕ ಪಾಠ ಕಲಿಸಲು ನಾವು ನಿರ್ಧರಿಸಿದ್ದೇವೆ. ಅದಕ್ಕಾಗಿಯೇ ಯೋಗೀಶ್ವರ್​, ಬಿಜೆಪಿ ಮತ್ತು ಅದರ ಕಾರ್ಯಕರ್ತರು ನಮ್ಮ ಬಡಾವಣೆಗೆ ಬರಬಾರದು ಎಂದು ಫಲಕ ಹಾಕಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಸಿ,ಪಿ ಯೋಗೀಶ್ವರ್​ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಗೆದ್ದಿದ್ದರು. ನಂತರ ಕಾಂಗ್ರೆಸ್​ ಸೇರಿದ್ದ ಯೋಗೀಶ್ವರ್​, ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸೇರಿದ್ದಾರೆ. ಅವರ ವಿರುದ್ಧ ಜೆಡಿಎಸ್​ನಿಂದ ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ, ಕಾಂಗ್ರೆಸ್​ನಿಂದ ಸಚಿವ ಎಚ್​.ಎಂ ರೇವಣ್ಣ ಸ್ಪರ್ಧಿಸುತ್ತಿದ್ದಾರೆ.

Comments are closed.