ಕರ್ನಾಟಕ

ನಗರದಲ್ಲಿ ಒಂದೇ ದಿನ ದಾಖಲೆ ಮಳೆ

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಮಾರ್ಚ್‌ 16ರಂದು ಸುರಿದ ಮಳೆಯು ಹತ್ತು ವರ್ಷಗಳ ದಾಖಲೆ ಬರೆದಿದೆ.

ನಗರದಲ್ಲಿ ಸುರಿಯುವ ಮಳೆಯ ಪ್ರಮಾಣವನ್ನು ಹವಾಮಾನ ಇಲಾಖೆಯು 24 ಗಂಟೆಗಳ ದಾಖಲೆ ಹಾಗೂ ಒಂದು ತಿಂಗಳ ದಾಖಲೆ ಎಂದು ವಿಂಗಡಣೆ ಮಾಡುತ್ತದೆ. ಮಾ.16 ರಂದು ಸುರಿದ ಮಳೆಯ ಪ್ರಮಾಣವನ್ನು ಶನಿವಾರ ಪ್ರಕಟಿಸಲಾಗಿದೆ. ನಗರದ ಕೇಂದ್ರಭಾಗದಲ್ಲಿರುವ ಮಳೆ ಮಾಪನ ಕೇಂದ್ರದಲ್ಲಿ ಒಂದೇ ದಿನ 38.4 ಮಿ.ಮೀ. ಮಳೆ ಸುರಿದಿದೆ. ಇದು 2017 ರ ಮಾ.8 ರಂದು ಸುರಿದ 36.8 ಮಿ.ಮೀ. ಮಳೆ ಪ್ರಮಾಣಕ್ಕಿಂತ ಹೆಚ್ಚಿರುವುದರಿಂದ ಹತ್ತು ವರ್ಷಗಳ ದಾಖಲೆಯಾಗಿದೆ. ಇದಕ್ಕಿಂತ ಹಿಂದೆ, ಎಂದರೆ 2008 ರವರೆಗೂ ಒಂದೇ ದಿನ ಇಷ್ಟೊಂದು ಮಳೆ ಬಿದ್ದಿಲ್ಲ. 1981 ರ ಮಾ.28 ರಂದು 61 ಮಿ.ಮೀ. ಮಳೆ ಸುರಿದಿತ್ತು.

ಮಾ.18 ಹಾಗೂ 19 ರಂದು ನಗರದಲ್ಲಿ ಜೋರಾದ ಗಾಳಿ ಸಹಿತ ಗುಡುಗು ಮಿಂಚಿನ ಜತೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮುನ್ಸೂಚನೆಯಂತೆ ಜೋರಾಗಿ ಮಳೆ ಸುರಿದರೆ 9 ಅಥವಾ 10 ವರ್ಷಗಳ ತಿಂಗಳ ಮಳೆ ದಾಖಲೆಯೂ ಮುರಿಯುವ ಸಾಧ್ಯತೆ ಇದೆ. 2017 ರ ಮಾರ್ಚ್‌ ತಿಂಗಳಲ್ಲಿ ಒಟ್ಟು 47 ಮಿ.ಮೀ. ಮಳೆಯಾಗಿತ್ತು. ಇದಕ್ಕಿಂತ ಹಿಂದೆ, 2008 ರಲ್ಲಿ 59.8 ಮಿ.ಮೀ. ಮಳೆ ದಾಖಲಾಗಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಮತ್ತಷ್ಟು ಮಳೆ ಸುರಿದರೆ ಮೊದಲಿಗೆ 9 ವರ್ಷಗಳ ದಾಖಲೆ ಹಾಗೂ ಮತ್ತೂ ಮಳೆ ಜೋರಾದರೆ ಹತ್ತು ವರ್ಷಗಳ ದಾಖಲೆಯಾಗುವುದು ಖಚಿತ. ಈ ವರ್ಷದ ಮಾ.1 ರಿಂದ ಇಲ್ಲಿಯವರೆಗೆ 44 ಮಿ.ಮೀ. ಮಳೆ ಸುರಿದಿದೆ.

24 ಗಂಟೆಗಳ ಮಳೆ ದಾಖಲೆ (ಮಾರ್ಚ್‌)

ವರ್ಷ, ದಿನಾಂಕ ಮಳೆ ಪ್ರಮಾಣ (ಮಿ.ಮೀ.)

2018,16 38.4

2017,8 36.8

2016,16 12.8

2015,3 22.2

2014,2 3.6

2013,8 0.6

2012,31 0.7

2011,27 0.2

2010,31 5.9

2009,16 17.2

2008,27 18

Comments are closed.