ರಾಷ್ಟ್ರೀಯ

ಪ್ರತ್ಯೇಕ ದಕ್ಷಿಣ ರಾಷ್ಟ್ರ: ಕಿಡಿಗೆ ಸ್ಟಾಲಿನ್‌ ತುಪ್ಪ

Pinterest LinkedIn Tumblr

ಚೆನ್ನೈ: ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರವಾಗಿ ಘೋಷಿಸಲು ದಕ್ಷಿಣದ ರಾಜ್ಯಗಳು ಬೇಡಿಕೆ ಇಟ್ಟರೆ, ಅಂತಹ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ ಕೆ ಸ್ಟಾಲಿನ್‌ ಹೇಳುವ ಮೂಲಕ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು, ‘ದಕ್ಷಿಣದ ರಾಜ್ಯಗಳು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಆದಾಯ ನೀಡುತ್ತಿದ್ದರೂ, ತಕ್ಕ ಪ್ರತಿಫಲ ಪಡೆಯುತ್ತಿಲ್ಲ’ ಎಂದು ಆರೋಪಿಸಿದ ಬೆನ್ನಲ್ಲೇ ಸ್ಟಾಲಿನ್‌ ಪ್ರತ್ಯೇಕ ‘ದ್ರಾವಿಡ ನಾಡು’ ರಾಷ್ಟ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

‘ದ್ರಾವಿಡ ನಾಡು’ ಹೆಸರಿನ ಪ್ರತ್ಯೇಕ ರಾಷ್ಟ್ರದ ಬಗ್ಗೆ ಹೆಚ್ಚುತ್ತಿರುವ ಭಾವನಾತ್ಮಕತೆ ಬಗ್ಗೆ ಪ್ರಶ್ನೆಯೊಂದಕ್ಕೆ ಈರೋಡ್‌ನಲ್ಲಿ ಉತ್ತರಿಸಿದ ಅವರು, ”ಅಂತಹ ಸಂದರ್ಭ ಬಂದರೆ ನಾನು ಸ್ವಾಗತಿಸುತ್ತೇನೆ. ಅಂತಹ ಪರಿಸ್ಥಿತಿ ಬರುತ್ತದೆಂದು ಆಶಿಸುತ್ತೇನೆ,” ಎಂದರು.

Comments are closed.