ಕರ್ನಾಟಕ

ಚುನಾವಣೆ ಹಿನ್ನೆಲೆ: ಶಾ ವಾಸ್ತವ್ಯಕ್ಕೆ ಬಾಡಿಗೆ ಮನೆ ಬುಕ್

Pinterest LinkedIn Tumblr


ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಾಸ್ತವ್ಯಕ್ಕಾಗಿ ಕರ್ನಾಟಕ ರಾಜಧಾನಿ ಬೆಂಗಳೂರಿನ ಚಾಲುಕ್ಯ ವೃತ್ತದ ಸಮೀಪದಲ್ಲಿ ಆರು ಕೊಠಡಿಗಳುಳ್ಳ ದೊಡ್ಡ ಮನೆಯನ್ನು ಬಾಡಿಗೆಗೆ ಪಡೆಯಲಾಗಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕನಸಿ ನೊಂದಿಗೆ ಶಾ ರಾಜ್ಯದಲ್ಲೇ ಮೊಕ್ಕಾಂ ಹೂಡಲು ನಿರ್ಧರಿಸಿದ್ದಾರೆ.

ಡಾಲರ್ಸ್ ಕಾಲೋನಿ, ಕುಮಾರ ಪಾರ್ಕ್ ಮತ್ತು ಚಾಲುಕ್ಯ ಸರ್ಕಲ್ ಮುಂತಾದವುಗಳ ಪೈಕಿ ಚಾಲುಕ್ಯ ಸರ್ಕಲ್ ಬಳಿಯಿರುವ ಮನೆ ಬಾಡಿಗೆ ಪಡೆಯಲು ವಿಶೇಷ ಭದ್ರತಾ ಪಡೆ ಅನುಮತಿ ನೀಡಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ಈ ಮೊದಲು ಶಾ ಕುಮಾರ ಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ ಚುನಾವಣೆ ದಿನಾಂಕ ಘೋಷಣೆಯಾದರೇ ಸರಕಾರಿ ಅತಿಥಿಗೃಹ ಲಭ್ಯವಾಗುವುದಿಲ್ಲ. ಹೀಗಾಗಿ, ಬೇರೆ ವ್ಯವಸ್ಥೆ ಮಾಡಿದ್ದೇವೆ. ರಾಜ್ಯ ಘಟಕ ಮನೆ ಬಾಡಿಗೆ ಹಣ ಪಾವತಿಸ ಲಿದೆ ಎಂದು ಹೇಳಿದರು.

ಮಾರ್ಚ್ ಅಂತ್ಯದ ವೇಳೆ ಶಾ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ವರ್ಗಾಯಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಮನೆ ಯಲ್ಲೇ ಕುಳಿತು ಪ್ರಮುಖ ಸಭೆಗಳನ್ನು ನಡೆಸಿ ತಂತ್ರಗಾರಿಕೆಗಳನ್ನು ಸಿದ್ಧಪಡಿಸಲಿದ್ದಾರೆ.

Comments are closed.