ಕರ್ನಾಟಕ

ಟಿಪ್ಪು ಜಯಂತಿ ಹೆಸರಿನಲ್ಲಿ ರಾಜಕೀಯ ವೈಷಮ್ಯ: ಸದಾನಂದಗೌಡ

Pinterest LinkedIn Tumblr


ಕುಶಾಲನಗರ: ಕೊಡಗಿನ ಜನತೆ ಎಂದಾಕ್ಷಣ ಎಲ್ಲರ ಎದೆಯಲ್ಲಿ ಮೂಡುವು ದು ದೈರ್ಯ, ಸಾಹಸಕ್ಕೆ ಹೆಸರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ನಂತಹ ಧೀಮಂತ ಯೋಧರು. ಇಂತಹ ನಾಡಿನ ಗಟ್ಟಿತನದ ಒಟ್ಟು ಕುಟುಂಬ ವನ್ನು ಕದಡುವ ಕೆಲಸಕ್ಕೆ ಟಿಪ್ಪು ಹೆಸರಿನಲ್ಲಿ ಜಯಂತಿಗಳನ್ನು ಅಚರಿಸುವ ಮೂಲಕ ಸರಕಾರ ತನ್ನ ರಾಜಕೀಯ ವೈಷಮ್ಯ ಬೆಸೆ ಯುತ್ತಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.

ಕುಶಾಲನಗರದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜ ದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗಿರುವ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಕಳೆದ ನಾಲ್ಕು ವರ್ಷಗಳಿಂದಲೂ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಜರುಗಿಸದೆ, ಬೆಂಬಲ ನೀಡುತ್ತಾ ಸುಮಾರು 175 ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆದು ಕೊಂಡಿದೆ.

ಎರಡುವರೆ ವರ್ಷಗಳಲ್ಲಿ 24 ಹಿಂದೂ ಯುವಕರ ಹತ್ಯೆಯಾಗಿದೆ. ರಾಜ್ಯದಲ್ಲಿ ನಡೆದ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಸಮಾಜಘಾತುಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಜನ ಸುರಕ್ಷಾ ಯಾತ್ರೆಯನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮರುಸ್ಥಾಪಿಸುವ ಪಣ ತೊಟ್ಟು ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ವನ್ನು ಅಧಿಕಾರದಿಂದ ಕಿತ್ತೊಗೆಯುವ ಸಂಕಲ್ಪದಿಂದ ಮಂಗಳೂರು ಚಲೊ ಆಯೋಜಿಸಲಾಗಿದೆ ಎಂದರು.

ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಮಾತನಾಡಿ, ಪ್ರತಿ ಪಟ್ಟಣದ ವ್ಯಾಪ್ತಿಯಲ್ಲಿ 97 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಮಂಗಳೂರಿನಲ್ಲಿ 1 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ರಾಜ್ಯದಲ್ಲಿ 15 ಹಿಂದು ಯುವಕರ ಕೊಲೆ ನಡೆ ದಿದ್ದು, ಎಲ್ಲಾ ಕೊಲೆಗಳನ್ನು ಮಾಡಿದ ರೀತಿಯಲ್ಲಿ ಸಾಮ್ಯತೆ ಇದೆ. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗಿನಿಂದ 400 ಜನ ಉಗ್ರ ಪಿಎಫ್‌ಐ ಕಾರ್ಯಕರ್ತರ ಕೇಸ್, 900 ಉಗ್ರರ ಮೇಲಿನ ಕೇಸ್ ಹಿಂಪಡೆಯಲಾಗಿದ್ದು, ಕಾಂಗ್ರೆಸ್ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ದ.ಕ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಯಾವ ರಾಜ್ಯ ಸರಕಾರಗಳು ಕೇವಲ ಒಂದೇ ಸಮಾಜಕ್ಕೆ ಭಾಗ್ಯ ಗಳನ್ನು ನೀಡಿರಲಿಲ್ಲ ಆದರೆ ಸಿದ್ದರಾಮಯ್ಯ ಸರಕಾರ ಹಿಂದೂ ಸಮಾಜದ ಹತ್ಯೆಗಳ ಭಾಗ್ಯವನ್ನು ರಾಜ್ಯದ ಜನತೆಗೆ ಕರುಣಿಸಿದೆ. ಸಿದ್ದರಾಮಯ್ಯನವರಿಗೆ ಇನ್ನು ಉಳಿದಿರುವುದು ಒಂದೇ ಯಾತ್ರೆ ಅದು ವಿಧಾನ ಸೌಧದಿಂದ ಮೈಸೂರಿನ ತಮ್ಮ ಮನೆಗೆ ಹೊರ ಡುವ ಯಾತ್ರೆ ಎಂದರು.

Comments are closed.