ಕರ್ನಾಟಕ

ಬಿಜೆಪಿ ಮುಖ ಕೆಡಿಸಿದ್ದು ಫೇಸ್‌ಬುಕ್‌ ಲೈವ್‌

Pinterest LinkedIn Tumblr


ಶಿವಮೊಗ್ಗ: ಸಾಮಾಜಿಕ ಜಾಲತಾಣ ಬಿಜೆಪಿಗೆ ಮುಳುವಾಯಿತೆ? ಇಂತಹದೊಂದು ಪ್ರಶ್ನೆ ಬಿಜೆಪಿ ವಲಯದಲ್ಲಿ ಪ್ರತಿಧ್ವನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಎರಡು ವಿಷಯಗಳು ಇದಕ್ಕೆ ಸಂಬಂಧಿಸಿದ್ದಾಗಿದೆ.

ಮೊದಲ ವಿಷಯವಾದ ಬಿಜೆಪಿಯ ಜಿಲ್ಲೆಯ ಉಪಾಧ್ಯಕ್ಷರಾದ ಬಿಳಕಿ ಕೃಷ್ಣಮೂರ್ತಿ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ಸಮ್ಮುಖದಲ್ಲೇ ಅನಪೇಕ್ಷಿತ ಪದಗಳ ಬಳಕೆಯಿಂದ ಆದ ವ್ಯತಿರಿಕ್ತ ಪರಿಣಾಮ.

ಕಳೆದ ಲೋಕಸಭೆ ಚುನಾವಣೆ ಸಮಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ಯಶಸ್ವಿಯಾಗಿ ಬೀರುತ್ತಾ ಬಂದಿದೆ. ಕಳೆದೊಂದು ವರ್ಷದಿಂದ ಜಿಲ್ಲಾ ಬಿಜೆಪಿ ಸುದ್ದಿಗೋಷ್ಠಿ ಯನ್ನೊಳಗೊಂಡಂತೆ ಪಕ್ಷದ ಎಲ್ಲಾ ಕಾರ್ಯಕ್ರಮವನ್ನು ಫೇಸ್‌ಬುಕ್‌ನಲ್ಲಿ ಲೆ„ವ್‌ ಮಾಡುತ್ತಿತ್ತು.

ಇದರ ಸಾಧಕ ಬಾಧಕ ಅರಿತೇ ಒಬ್ಬ ಕಾರ್ಯಕರ್ತ ಬಿಎಸ್‌ವೈ ಮನೆಯಲ್ಲಿ ರುದ್ರೇಗೌಡರ ಪರವಾಗಿ ನಡೆದ ಸಭೆಯನ್ನು ಫೇಸ್‌ಬುಕ್‌ನಲ್ಲಿ ಲೆ„ವ್‌ ಮಾಡಿದ್ದ. ಆ ಲೆ„ವ್‌ ವರದಿ ಪ್ರಸ್ತುತ ಬಿಜೆಪಿ ಬಿಕ್ಕಟ್ಟಿಗೆ ನಾಂದಿ ಹಾಡಿದೆ. ಇದರ ಪರಿಣಾಮ ಪ್ರಕರಣ ಎಸ್ಪಿ ಕಚೇರಿ ಮೆಟ್ಟಿಲು ಏರಿದೆ. ಈಶ್ವರಪ್ಪ ಪರವಾದ ಗುಂಪಿನಿಂದ ನನಗೆ ಪ್ರಾಣ ಬೆದರಿಕೆ ಇದೆ ಎಂದು ಬಿಳಕಿ ಕೃಷ್ಣಮೂರ್ತಿ ದೂರು ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಅಭ್ಯರ್ಥಿಗಳ ಹೆಸರನ್ನು ಅಮಿತ್‌ ಶಾ ಅಂತಿಮಗೊಳಿ ಸು ತ್ತಾರೆ ಎಂದು ಯಡಿಯೂರಪ್ಪ ಹೇಳಿದರೂ ಫೇಸ್‌ಬುಕ್‌ ಸ್ಟೇಟಸ್‌ ಪ್ರಕಾರ ಸಾಗರದ ಅಭ್ಯರ್ಥಿ ಯಾಗಿ ಹರತಾಳು ಹಾಲಪ್ಪರ ಹೆಸರು ಘೋಷಣೆಯಾಗಿದೆ. ಫೇಸ್‌ಬುಕ್‌ನಲ್ಲಿ ಈ ಮಾಹಿತಿಯನ್ನು ಬಿಜೆಪಿ ಮೂಲಗಳೇ ಹರಡು ತ್ತಿದ್ದು, ಇದು ಸಮಸ್ಯೆಗೆ ಕಾರಣವಾಗಿದೆ. ಈ ಘಟನೆಗಳಿಂದಾಗಿ ಜಿಲ್ಲೆಯ ಬಿಜೆಪಿ ನಾಯಕರು ಜಾಲತಾಣಗಳ ಬಳಕೆ ಬಗ್ಗೆ ಯೋಚಿಸುವಂತಾಗಿದೆ.

-ಉದಯವಾಣಿ

Comments are closed.