ಬೀದರ್: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಕದನಕ್ಕೆ ಸಜ್ಜಾಗುತ್ತಿದ್ದು, ಇತ್ತ ಆಕಾಂಕ್ಷಿಗಳು ಟಿಕೆಟ್‌ಗಾಗಿ ದೆಹಲಿಯಲ್ಲಿ ಬೀಡು ಬಿಟ್ಟು ನಾಯಕರ ದುಂಬಾಲು ಬಿದ್ದಿದ್ದಾರೆ. ಜಿಲ್ಲೆಯ ಪ್ರಬಲ ಆಕಾಂಕ್ಷಿಗಳಲ್ಲಿ ಈ ಬಾರಿ ಇಬ್ಬರು ನಿವೃತ್ತ ಹಿರಿಯ ಕೆಎಎಸ್ ಅ ಧಿಕಾರಿಗಳು ಸೇರಿರುವುದು ವಿಶೇಷ.
ಸೇವೆಯಿಂದ ನಿವೃತ್ತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಕಾರ್ಯದರ್ಶಿ ಭೀಮಸೇನರಾವ್ ಶಿಂಧೆ ಮತ್ತು ಕೆಎಎಸ್ ಅಧಿ ಕಾರಿ ಶಂಕರ ಪಾಟೀಲ ಚುನಾವಣಾ ಕಣಕ್ಕೆ ಇಳಿಯಲು ಬಯಸಿದ್ದಾರೆ. ದಶಕಗಳ ಕಾಲ ಸರ್ಕಾರಿ ಉನ್ನತ ಹುದ್ದೆಯಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಿರುವ ಈ ಇಬ್ಬರು ಅಧಿ ಕಾರಿಗಳು ಈಗ ಜನಸೇವೆ ಮಾಡುವುದಕ್ಕೆ ರಾಜಕೀಯ ಅಖಾಡಕ್ಕೆ ಧುಮುಕಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ರಾಜಕೀಯ ನೆಲೆಯಲ್ಲಿ ಸದೃಢವಾಗಿ ಬೆಳೆಯಲು ಮುಂದಾಗುತ್ತಿದ್ದಾರೆ.
ಭೀಮಸೇನರಾವ್ ಶಿಂಧೆ ಜಿಲ್ಲೆಯ ಔರಾದ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಶಿಂಧೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಲ್ಲಿ ಒಬ್ಬರೆನಿಸಿಕೊಂಡಿದ್ದು, ಚುನಾವಣೆ ಯಲ್ಲಿ ಸ್ಪರ್ಧೆಗೆ ಸಿಎಂ ಸಹ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶಂಕರ ಪಾಟೀಲ ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದು, ಬೀದರ ದಕ್ಷಿಣ ಕ್ಷೇತ್ರದ ಮೇಲೆ ಕಣ್ಣು ಹರಿಸಿದ್ದಾರೆ. ಇಬ್ಬರು ಆಕಾಂಕ್ಷಿಗಳು ಕ್ಷೇತ್ರಗಳಲ್ಲಿ ಸುತ್ತಾಡಿ ಜನರ ಸಂಪರ್ಕ ಸಾಧಿ ಸುತ್ತಿದ್ದಾರೆ.
ಯಾರು ಈ ಶಿಂಧೆ?: ಸಿಎಂ ಹೆಚ್ಚುವರಿ ಕಾರ್ಯದಶಿಯಾಗಿದ್ದ ಭೀಮಸೇನರಾವ್ ಶಿಂಧೆ ಅವರನ್ನು ಗುತ್ತಿಗೆ ಆಧಾರದಲ್ಲಿ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿತ್ತು. ಈಗ ಆ ಅವ ಧಿಯೂ ಪೂರ್ಣಗೊಂಡಿದೆ. ಹಲವು ವರ್ಷಗಳಿಂದ ಮುಖ್ಯಮಂತ್ರಿ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸಿರುವ ಶಿಂಧೆ ಅವರು ಈ ಮೊದಲು ಉಪನ್ಯಾಸ, ತಹಶೀಲ್ದಾರ್, ಪರಿಷತ್ ಕಾರ್ಯದರ್ಶಿ, ಹೆಚ್ಚುವರಿ ಡಿಸಿ, ಸಿಎಂ ಅ ಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಶಿಂಧೆ ಮಾಜಿ ಸಂಸದರ ಅಳಿಯ. ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಶಿಂಧೆ ಅವರೂ ಒಬ್ಬರಾಗಿದ್ದಾರೆ. ಹಾಗಾಗಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ಇವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇನ್ನು ಕ್ಷೇತ್ರದಲ್ಲಿ ಮಾಜಿ ಎಂಎಲ್‌ಸಿ ಕೆ.ಪುಂಡಲಿಕರಾವ್, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಬಕ್ಕಪ್ಪ ಕೋಟೆ, ಮುಖಂಡರಾದ ಡಾ.ಲಕ್ಷಣ ಸೊರಳ್ಳಿಕರ್, ಶಂಕರರಾವ್ ದೊಡ್ಡಿ, ವಿಜಯಕುಮಾರ ಪಾಟೀಲ ಸೇರಿದಂತೆ ಮತ್ತಿತರರ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ.
ಶಂಕರ ಪಾಟೀಲ ಯಾರು?: ಔರಾದ ತಾಲೂಕಿನ ಕೌಡಗಾಂವ ಗ್ರಾಮದವರಾಗಿರುವ ಶಂಕರ ಪಾಟೀಲ ಅವರು ಸೇಡಂ ಸಹಾಯಕ ಆಯುಕ್ತ ರಾಗಿ, ಕರ್ನಾಟಕ ವೇರ್‌ಹೌಸ್ ಕಾರ್ಪೊರೇಶನ್ ವ್ಯವಸ್ಥಾಪಕ ನಿರ್ದೇಶಕ, ಬಿಬಿಎಂಪಿ ಹೆಚ್ಚುವರಿ ಆಯುಕ್ತ, ಸಿಎಂ ಉಪ ಕಾರ್ಯದರ್ಶಿ, ಎನ್‌ಈಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನಂತರ ರಾಜ್ಯ ಮಾಹಿತಿ ಆಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಬೀದರ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪ ರ್ಧಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಆಪ್ತ, ಪಕ್ಷದ ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಶೈಲೇಂದ್ರ ಅವರು ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪರಿವರ್ತನಾ ಯಾತ್ರೆ ವೇಳೆ ಬಿಎಸ್‌ವೈ ಬೆಲ್ದಾಳೆ ಅವರನ್ನು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡುವುದಾಗಿ ಪ್ರಕಟಿಸುತ್ತಿದ್ದಂತೆ ಶಂಕರ ಪಾಟೀಲರ ಚಿತ್ತ ಬೀದರ ದಕ್ಷಿಣದತ್ತ ಹರಿದಿದೆ.
* ಶಶಿಕಾಂತ ಬಂಬುಳಗೆ
-ಉದಯವಾಣಿ