ಕರ್ನಾಟಕ

ಕನ್ನಡದಲ್ಲೂ ಸಿಗಲಿದೆ ರೈಲ್ವೆ ಟಿಕೆಟ್‌

Pinterest LinkedIn Tumblr


ಹುಬ್ಬಳ್ಳಿ: ಇಲ್ಲಿನ ನೈಋತ್ಯ ರೈಲ್ವೆಯ ಪ್ರಯಾಣದ ಟಿಕೆಟ್‌ಗಳಲ್ಲಿ ಇನ್ನು ಮುಂದೆ ಇಂಗ್ಲಿಷ್‌ ಹಾಗೂ ಹಿಂದಿಯೊಂದಿಗೆ ಕನ್ನಡ ಭಾಷೆಯೂ ರಾರಾಜಿಸಲಿದೆ. ಇದೀಗ ಹುಬ್ಬಳ್ಳಿ ನಿಲ್ದಾಣದಲ್ಲಿ ಮೂರು ಭಾಷೆ ಇರುವ ಟಿಕೆಟ್‌ ದೊರೆಯುತ್ತಿದ್ದು, ರಾಜ್ಯದ ಎಲ್ಲಾ ನಿಲ್ದಾಣದಲ್ಲಿ ಶೀಘ್ರ ಜಾರಿಯಾಗಲಿದೆ. ಸ್ವಯಂ ಚಾಲಿತ ಟಿಕೆಟ್‌ ಮಾರಾಟ ಯಂತ್ರಗಳಿಂದ ಪಡೆಯುವ ಟಿಕೆಟ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ಊರಿನ ಹೆಸರು ಮುದ್ರಣವಾಗುತ್ತಿದೆ. ದೇಶದ ಎಲ್ಲಾ 9,094 ನಿಲ್ದಾಣಗಳ ಹೆಸರನ್ನು ಕನ್ನಡ ಭಾಷೆಯಲ್ಲೂ ನಮೂದಿಸಿ ಸಾಫ್ಟ್‌ವೇರ್‌ಗೆ ಸೇರಿಸಲಾಗಿದೆ.

ಎಟಿವಿಎಂ ಹಾಗೂ ಮೊಬೈಲ್‌ ಟಿಕೆಟಿಂಗ್‌ ಆ್ಯಪ್‌ಗ್ಳ ಮೂಲಕ ಖರೀದಿಸುವ ಟಿಕೆಟ್‌ ಗಳಲ್ಲೂ ಕನ್ನಡ ಭಾಷೆ ಇರಲಿದೆ. ಈ ಟಿಕೆಟ್‌ಗಳಲ್ಲಿ ಪ್ರಯಾಣ ಆರಂಭಿಸಿದ ನಿಲ್ದಾಣ ಹಾಗೂ ತಲುಪುವ ನಿಲ್ದಾಣ, ಪ್ರಯಾಣದ ದರ್ಜೆ ಮತ್ತು ರೈಲಿನ ವಿವಿಧ (ಪ್ಯಾಸೆಂಜರ್‌/ಎಕ್ಸ್‌ಪ್ರೆಸ್‌) ಮಾಹಿತಿ ಇಂಗ್ಲಿಷ್‌, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ದೊರೆಯಲಿದೆ. ಟಿಕೆಟ್‌ಗಳಲ್ಲಿ ಕನ್ನಡ ಭಾಷೆ ಇರುವುದರಿಂದ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಅನುಕೂಲ ವಾಗಲಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.

-ಉದಯವಾಣಿ

Comments are closed.