ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಹಾಗೂ ಗ್ಯಾಂಗ್ ನ ಜಾಮೀನು ಅರ್ಜಿಗಳ ವಿಚಾರಣೆ ಮಂಗಳವಾರ ಅಂತ್ಯಗೊಂಡಿದ್ದು, ಮಾರ್ಚ್ 2ರಂದು ಜಾಮೀನು ಅರ್ಜಿ ಕುರಿತ ಆದೇಶ ನೀಡುವುದಾಗಿ ಬೆಂಗಳೂರಿನ 63ನೇ ಸೆಷನ್ಸ್ ಕೋರ್ಟ್ ತಿಳಿಸಿದೆ.
ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಕುರಿತಾಗಿ ಇಂದೂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಬಗ್ಗೆ ವಾದ, ಪ್ರತಿವಾದವನ್ನು ನ್ಯಾಯಾಧೀಶರು ಆಲಿಸಿದರು. ಈ ಹಿನ್ನೆಲೆಯಲ್ಲಿ ಮಾರ್ಚ್ 2ರಂದು ಜಾಮೀನು ಅರ್ಜಿಗಳ ಕುರಿತು ಆದೇಶ ನೀಡುವುದಾಗಿ ಹೇಳಿದೆ.
ಮೊಹಮ್ಮದ್ ನಲಪಾಡ್ ಪರವಾಗಿ ವಕೀಲರಾದ ಟಾಮಿ ಸೆಬಾಷ್ಟಿಯನ್ ವಾದ ಮಂಡಿಸಿದ್ದು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮ್ ಸುಂದರ್ ಅವರು ಪ್ರತಿವಾದ ಮಂಡಿಸಿದ್ದರು.
-ಉದಯವಾಣಿ