ಕರ್ನಾಟಕ

ಜೈಲಲ್ಲೂ ನಲಪಾಡ್​ ದರ್ಬಾರ್​?

Pinterest LinkedIn Tumblr


ಬೆಂಗಳೂರು: ಪರಪ್ಪನ ಅಗ್ರಹಾರ ಸೇರಿರುವ ಮಹಮದ್​ ನಲಪಾಡ್ ಅಲ್ಲೂ ದರ್ಬಾರ್​ ನಡೆಸುತ್ತಿದ್ದಾರೆ. ಜೈಲಿನಲ್ಲೂ ರಾಜಾತಿಥ್ಯ ಸಿಗುತ್ತಿದೆ. ಅಲ್ಲಿಗೆ ಸೇರಿದ ಎರಡನೇ ದಿನಕ್ಕೆ ಕೈಯಲ್ಲಿ ಮೊಬೈಲ್​ ಹಿಡಿದಿದ್ದು, ಸ್ನೇಹಿತರ ಜತೆ ಸಂಪರ್ಕದಲ್ಲಿದ್ದಾರೆ. ಅಲ್ಲದೆ, ತನ್ನ ಜಾಮೀನು ಅರ್ಜಿ ಕುರಿತು ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಕಳೆದ ರಾತ್ರಿ ನಲಪಾಡ್​ ಮತ್ತು ಸಹಚರರಿಗೆ ಭರ್ಜರಿ ಭೂರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮತ್ತೊಬ್ಬ ಆರೋಪಿ ಮಂಜುನಾಥ್​ ಮನೆಯಿಂದ ಈ ಊಟದ ವ್ಯವಸ್ಥೆ ಮಾಡಲಾಗಿತ್ತು.

ರಾತ್ರಿ 1.30ರ ವರೆಗೂ ತನ್ನ ಗ್ಯಾಂಗ್​ ಜತೆ ಹರಟೆ ಹೊಡೆಯುತ್ತಿದ್ದು ನಂತರ ಮಲಗಿದ್ದಾರೆ.

Comments are closed.