ಕರ್ನಾಟಕ

ಜಮೀನಿನ ಬೇಲಿ ಕಿತ್ತೆಸೆದ ಪ್ರಕರಣ: ಸಿಎಂ ಪುತ್ರನ ಸ್ನೇಹಿತನಿಂದ ಕೃತ್ಯ

Pinterest LinkedIn Tumblr


ಬೆಂಗಳೂರು: ಬಿಡಿಎಯಿಂದ ಬದಲಿ ನಿವೇಶನ ರೂಪದಲ್ಲಿ .ಶಾಂತ ಇಂಡಸ್ಟ್ರೀಸ್‌ಗೆ ಜಮೀನು ಮಂಜೂರು ಮಾಡಿಸಿಕೊಂಡಿದ್ದ ಸಿಎಂ ಪುತ್ರ ಡಾ.ಯತೀಂದ್ರ ಅವರ ಸ್ನೇಹಿತ ರಾಜೇಶ್‌ ಹಾಗೂ ಸಂಗಡಿಗರು ಪಕ್ಕದ ಭೂ ಮಾಲೀಕರ ಜಮೀನಿನ ಬೇಲಿ ಕಿತ್ತೆಸೆದ ಆರೋಪ ಕೇಳಿಬಂದಿದೆ. ಈ ಸಂಬಂಧ ಪ್ರಕರಣವು ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಹೆಬ್ಟಾಳ ರಿಂಗ್‌ ರಸ್ತೆಯ ನಿವಾಸಿ ಎಚ್‌.ಬಿ.ಶಿವರಾಮ್‌ ಎಂಬುವವರಿಗೆ ಸೇರಿದ ಜಾಗದಲ್ಲಿದ್ದ ಬೇಲಿಯನ್ನು ರಾಜೇಶ್‌ ಹಾಗೂ ಸಂಗಡಿಗರು ಹಾಳುಗೆಡವಿದ್ದಾರೆ. ಈ ವಿಚಾರದಲ್ಲಿಜಗಳವಾಗಿದ್ದು ಅಮೃತಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಎಚ್‌.ಬಿ.ಶಿವರಾಮ್‌ ಕುಟುಂಬಕ್ಕೆ ಸೇರಿರುವ ಸರ್ವೆ ನಂ. 110/2ರ 19 ಗುಂಟೆ ಜಮೀನು ಹೆಬ್ಟಾಳದ ಮೇಲು ರಸ್ತೆ ಬಳಿಯಿದೆ. ಇದು ಬಿಡಿಎ ಅರ್ಕಾವತಿ ಲೇಔಟ್‌ ವ್ಯಾಪ್ತಿಯಲ್ಲಿಬರಲಿದ್ದು , ಸದರಿ ಜಮೀನು ಭೂಮಾಲೀಕರ ವಶದಲ್ಲಿದೆ. ಹೀಗಿದ್ದರೂ, ಭೂಮಾಲೀಕರ ಒಪ್ಪಿಗೆ ಇಲ್ಲದೆ ಅತಿಕ್ರಮಿಸಿ ಅಲ್ಲಿನಿರ್ಮಿಸಿದ್ದ ಬೇಲಿಯನ್ನು ಜೆಸಿಬಿಯಿಂದ ಕಿತ್ತು ಹಾಕಿದ ವೇಳೆ ಮಾತಿನ ಚಕಮಕಿ ನಡೆದಿದೆ. ರಾಜೇಶ್‌ ತನಗೆ ಸಿಎಂ ಪುತ್ರನ ಬೆಂಬಲವಿದ್ದು , ತಗಾದೆ ತೆಗೆಯದಂತೆ ಧಮಕಿ ಹಾಕಿದ್ದಾರೆಂದು ದೂರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಎಚ್‌.ಬಿ.ಶಿವರಾಮ್‌ ಠಾಣೆಗೆ ದೂರು ನೀಡಿದ್ದು , ದೂರು ಪ್ರತಿಯಲ್ಲಿಬೇಲಿ ಕಿತ್ತೆಸೆದವರು ಅಪರಿಚಿತ ವ್ಯಕ್ತಿಗಳೆಂದು ನಮೂದಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.

ಬಿಡಿಎಯಿಂದ ಬದಲಿ ನಿವೇಶನ ರೂಪದಲ್ಲಿಹೆಬ್ಟಾಳದ ಬಳಿ ಕೋಟ್ಯಂತರ ಬೆಲೆ ಬಾಳುವ ಜಮೀನು ಮಂಜೂರು ಮಾಡಿಕೊಟ್ಟಿದ್ದರಲ್ಲಿಸಿಎಂ ಪುತ್ರನ ಪ್ರಭಾವವಿದೆ ಎಂಬ ಆರೋಪ ಕೇಳಿ ಬಂದಿತ್ತು.

ಬಿಡಿಎ ಸಮಜಾಯಿಷಿ

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಬಿಡಿಎ ಅಧಿಕಾರಿಗಳು ಖಾಸಗಿ ಜಮೀನಿನ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯದಲ್ಲಿಪ್ರಾಧಿಕಾರ ಮೂಗು ತೂರಿಸುವುದಿಲ್ಲ. ಹಾಲಿ ಪ್ರಕರಣದಲ್ಲಿತಗಾದೆಗೆ ಒಳಗಾಗಿರುವ ಭೂಮಿ ಬಿಡಿಎಗೆ ಸೇರಿಲ್ಲ. ಮೆ.ಶಾಂತ ಇಂಡಸ್ಟ್ರೀಸ್‌ಗೆ ಈಗಾಗಲೇ ನಿಯಮದಂತೆ ಭೂ ಮಂಜೂರಾತಿ ನೀಡಿದ್ದು ಪ್ರಾಧಿಕಾರಕ್ಕೂ ಘಟನೆಗೆ ಸಂಬಂಧ ಇಲ್ಲ ಎಂದಿದ್ದಾರೆ.

Comments are closed.