ಬೆಳಗಾವಿ: ಶಾಸಕ ಹ್ಯಾರಿಸ್ ಪುತ್ರ ಹಲ್ಲೆ ನಡೆಸಿರುವುದು ಅದು ವೈಯಕ್ತಿಕ ವಿಚಾರ. ಹುಡುಗರು ಮಾಡಿದ ತಪ್ಪು. ಅದನ್ನ ನಾವು ತಪ್ಪು ಅಂತ ಹೇಳುತ್ತಿದ್ದೇವೆ ಅದಕ್ಕೆ ಕಾನೂನು ರೀತಿ ಕ್ರಮ ಕೈಗೊಂಡಿದ್ದೇವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
ಶುಕ್ರವಾರ ನೂತನ ಕಾಂಗ್ರೆಸ್ ಕಚೇರಿಯ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿ, ಶಾಸಕ ಹ್ಯಾರಿಸ್ ಪುತ್ರನ ಮಾಡಿರುವ ಹಲ್ಲೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಅದು ಹುಡುಗರು ಮಾಡಿದ ವೈಯಕ್ತಿಕ ವಿಚಾರ. ಅದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ ಎಂದರು.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡನೇ ಹಂತದ ಜನಾಶೀರ್ವಾದದ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಯುವಕರು, ರೈತರು ಸೇರಿದಂತೆ ಎಲ್ಲ ವರ್ಗದ ಭೇಟಿಯಾಗಲಿದ್ದಾರೆ ಎಂದು ಅವರು ಹೇಳಿದರು. ಎಐಸಿಸಿ ಅಧ್ಯಕ್ಷರು ನಾಳೆ ಸಭೆ ನಡೆಸಿ ಬೆಳಗಾವಿ ಜಿಲ್ಲೆಯಲ್ಲಿರುವ ಕಾಂಗ್ರೆಸ್ ನಲ್ಲಿ ಭಿನ್ನಮತ ಶಮನ ಮಾಡಲಿದ್ದಾರೆ. ಇಲ್ಲ ವ್ಯಕ್ತಿ ಪೂಜೆ ಇಲ್ಲ. ಪಕ್ಷದ ಮಾತ್ರ ಮಾಡುವುದು ಒಂದೇ ಗುರಿ ಎಂದರು. ಕಾಂಗ್ರೆಸ್ ಪಕ್ಷಕ್ಕೆ ನಮ್ಮ ನಾಯಕರ ನಾಯಕತ್ವದಲ್ಲಿ ನಮ್ಮ ಸಿದ್ದಾಂತ ಒಪ್ಪುವುದಾರೇ ಯಾರು ಬೇಕಾದರು ಬರಬಹುದು ಎಂದರು.