
ಆನೇಕಲ್ : ರಾಸುಗಳು, ನಾಯಿ, ಕುರಿ, ಮೇಕೆ ಸೇರಿದಂತೆ ಮನುಷ್ಯರ ಮೇಲೆ ಮಿಂಚಿನಿಂತೆ ದಾಳಿ ನಡೆಸಿ ಶರವೇಗವಾಗದಲ್ಲಿ ಚಿರತೆಗಳು ಪರಾರಿಯಾಗುವುದು ಆದರೆ ಅಚ್ಚರಿ ಎಂಬಂತೆ ಕರ್ನಾಟಕ- ತಮಿಳುನಾಡಿನ ಗಡಿಯ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ರೈತನೊಬ್ಬನ ಮೇಲೆರಗಲು ಹೋದ ಚಿರತೆಯ ಆಯಸ್ಸು ಮುಗಿದು ಹೋಗಿತ್ತು.
ಹೊಸೂರಿಗೆ ಹೊಂದಿಕೊಂಡಿರೋ ಸೂಳಗಿರಿ ಗ್ರಾಮದಲ್ಲಿ ಚಿರತೆಯೊಂದು ನುಗ್ಗಿದ್ದು, ಹಸುವನ್ನು ಕೊಂದಿದೆ. ಬಳಿಕ ರೈತನ ಮೇಲೆ ಎರಗಿದ್ದು, ಪ್ರಾಣ ರಕ್ಷಣೆಗಾಗಿ ರೈತ ರಾಮಮೂರ್ತಿ ಮಚ್ಚಿನಿಂದ ಹಲ್ಲೆ ನಡೆಸಿ ಚಿರತೆಯನ್ನೇ ಕೊಂದಿದ್ದಾನೆ. ಬೆಳಗ್ಗೆ ಗ್ರಾಮಕ್ಕೆ ಪ್ರವೇಶಿಸಿದ ಚಿರತೆ ಮೊದಲಿಗೆ ರಾಮಮೂರ್ತಿಯವರ ಕೊಟ್ಟಿಗೆಗೆ ನುಗ್ಗಿ ಹಸುವಿನ ದಾಳಿ ಮಾಡಿ ಕೊಂದು ಹಾಕಿದೆ. ಕೊಟ್ಟಿಗೆಯಲ್ಲಿನ ಸದ್ದು ಕೇಳಿ ಕೊಟ್ಟಿಗೆಗೆ ಬಂದ ರಾಮಮೂರ್ತಿ ಮೇಲೆ ಚಿರತೆ ದಾಳಿ ಮಾಡಿದ ತಕ್ಷಣ ರಾಮಮೂರ್ತಿ ತಕ್ಷಣ ಮಚ್ಚಿನಿಂದ ಚಿರತೆ ಮೇಲೆ ಮರು ದಾಳಿ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.
Comments are closed.