ಕರ್ನಾಟಕ

ಸಪ್ತಪದಿ ತುಳಿದ ‘ಲಕ್ಷ್ಮೀ ಬಾರಮ್ಮ’ ನೇಹಾ ಗೌಡ

Pinterest LinkedIn Tumblr


ಬೆಂಗಳೂರು: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಗೊಂಬೆ ಅಂತಾ ಖ್ಯಾತಿ ಪಡೆದ ನೇಹಾ ಗೌಡ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷಾಂತ್ಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ನಟಿ ಸೋನುಗೌಡ ಅವರ ಸಹೋದರಿ ನೇಹಾಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ರನ್ನು ವರಿಸಿದರು. ಆಶ್ಚರ್ಯ ಎಂದರೆ ‘ಲಕ್ಷ್ಮೀ ಬಾರಮ್ಮ’ ಧಾರಾ ವಾಹಿಯಲ್ಲೂ ಗೊಂಬೆಯನ್ನ ಮದುವೆ ಆಗಿರುವ ನಾಯಕನ ಹೆಸರು ಚಂದನ್. ಮೈಸೂರು ರಸ್ತೆಯ ಲ್ಲಿರುವ ಸಾಯಿ ಪ್ಯಾಲೆಸ್ ನಲ್ಲಿ ಅದ್ದೂರಿಯಾಗಿ ಸಮಾರಂಭ ನಡೆದಿದ್ದು, ಸಿನಿಮಾ ರಂಗದ ಗಣ್ಯರು, ಹಾಗೂ ಧಾರಾವಾಹಿಯ ಕಲಾವಿದರು ಕೂಡ ಭಾಗಿಯಾಗಿದ್ದರು.

ಚಂದನ್ ಸದ್ಯ ಬ್ಯಾಂಕಾಕ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೆಲವು ದಿನಗಳ ನಂತರ ನೇಹಾಗೌಡ ಕೂಡ ಬ್ಯಾಂಕಾಕ್ ಗೆ ಪ್ರಯಾಣ ಬೆಳಸಲಿದ್ದಾರೆ. ನೇಹಾ ಅಭಿನಯ ಮಾಡುತ್ತಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಚಿತ್ರೀಕರಣ ಮುಗಿಯುವ ತನಕ ವೂ ಗೊಂಬೆ ಪಾತ್ರದಲ್ಲಿ ನೇಹಾಗೌಡ ಮುಂದುವರೆಯಲಿದ್ದಾರೆ.

Comments are closed.