ರಾಷ್ಟ್ರೀಯ

ಅತ್ಯಾಚಾರ ಆರೋಪ: ಚ್ಯಾನೆಲ್ ಸಂಪಾದಕರ ಬಂಧನ

Pinterest LinkedIn Tumblr


ದೆಹಲಿ: ಮಹಿಳಾ ಉದ್ಯೋಗಿಯೊಬ್ಬರನ್ನು ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ಹಿಂದಿ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರನ್ನು ಬಂಧಿಸಿದ್ದಾರೆ.

ಫೆ.13ರಂದು ದೆಹಲಿಯ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾ ಗಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ, 2016ರಲ್ಲಿ ಝೆನೆಟಿಕ್ಸ್ ಜಿಮ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಇಂದಿರಾಪುರಂನಲ್ಲಿ ವಾಸಿಸುತ್ತಿದ್ದೆ. ಆಗ ಉಮೇಶ್ ಕುಮಾರ್ ಅವರ ಪರಿಚ ಯವಾಗಿ, ಕಳೆದ ವರ್ಷ ಜೂನ್ ನಲ್ಲಿ ತನ್ನ ನಿವಾಸಕ್ಕೆ ಕರೆಸಿ, ಮದುವೆ ಮಾಡಿಕೊಳ್ಳುವ ನೆಪದಲ್ಲಿ ತಮ್ಮ ಜೊತೆ ದೈಹಿಕ ಸಂಬಂಧ ಬೆಳೆಸಿ ದರು.

ನಂತರ ಆಗಸ್ಟ್ ನಲ್ಲಿ ಕ್ಲಾರಿಡ್ಜ್ ಹೊಟೇಲ್ ಗೆ ಕರೆದು ತನ್ನ ಮೇಲೆ ಅತ್ಯಾಚಾರ ನಡೆಸಿದರು. ನಂತರ ಉಮೇಶ್ ಅವರಿಗೆ ಮದುವೆ ಯಾಗಿರುವುದು ತಿಳಿಯಿತು ಎಂದು ತಿಳಿಸಿದ್ದಾರೆ. ಉಮೇಶ್ ಹೊಟೇಲ್ ನಲ್ಲಿ ಸಂತ್ರಸ್ತೆ ಹೇಳಿದ ದಿನ ಕೋಣೆ ಬುಕ್ ಮಾಡಿದ್ದರು ಎಂದು ಹೊಟೇಲ್ ಸಿಬ್ಬಂದಿ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಉಮೇಶ್ ವಿರುದ್ಧ ಕೇಸು ದಾಖಲಿಸಲಾಗಿದೆ.

Comments are closed.