ಕರಾವಳಿ

ಇತಿಹಾಸ ಪ್ರಸಿದ್ಧ ಅಡ್ಯಾರ್ ಕಣ್ಣೂರು ಉರೂಸ್ ಮುಬಾರಕ್-2018ಗೆ ಚಾಲನೆ

Pinterest LinkedIn Tumblr

ಮಂಗಳೂರು, ಇತಿಹಾಸ ಪ್ರಸಿದ್ಧ ಅಡ್ಯಾರ್ ಕಣ್ಣೂರು ಹಝ್ರತ್ ಶೈಖ್ ಯೂಸುಫ್ ಸಿದ್ದೀಖ್ ವಲಿಯುಲ್ಲಾಹಿ(ಖ.ಸ)ರವರ ದರ್ಗಾ ಶರೀಫ್ ಉರೂಸ್ ಮುಬಾರಕ್ ಫೆಬ್ರವರಿ18ರಿಂದ25ತನಕ ನಡೆಯಲಿದ್ದು ಭಾನುವಾರ ದ.ಕ ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಧ್ವಜಾರೋಹಣಗೈದು ಅಡ್ಯಾರ್ ಕಣ್ಣೂರು ಉರೂಸ್ ಮುಬಾರಕ್-2018ಗೆ ಚಾಲನೆ ನೀಡಿದರು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಮಿತ್ತಬೈಲ್ ಉಸ್ತಾದ್ ದುಅ ನೇತ್ರತ್ವ ವಹಿಸಿದರು.

ಕಣ್ಣೂರು ಬದ್ರಿಯ ಜುಮಾ ಮಸೀದಿ ಮುದರ್ರಿಸ್ ಅನ್ಸಾರ್ ಫೈಝಿ ಬು್ಹಾನಿ, ಎಸ್ ವೈಎಸ್ ಶರೀಯತ್ ಕಾಲೇಜ್ ಪ್ರಿನ್ಸಿಪಾಲ್ ಇಸ್ಮಾಯಿಲ್ ಮದನಿ, ಕಣ್ಣೂರು ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ ರಹ್ಮಾನ್, ಉಪಾಧ್ಯಕ್ಷ ಹಾಜಿ ಕೆ.ಎಸ್ ಹಮೀದ್, ಕೋಶಾಧಿಕಾರಿ ಹಾಜಿ ಕೆ.ಬಿ ಅಬ್ದುಲ್ ರಹ್ಮಾನ್, ಲೆಕ್ಕ ಪರಿಶೋಧಕ ಹಾಜಿ ಡಿ.ಎಂ ಮುಹಮ್ಮದ್‌, ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಎ.ಕೆ, ಮಾಜಿ ಅಧ್ಯಕ್ಷ ಹಾಜಿ ಎಸ್. ಅಬ್ದುಲ್‌ ಖಾದರ್, ಮಂಗಳೂರು ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹಮೀದ್ ಹಾಜಿ, ಉದ್ಯಮಿಗಳಾದ ಅದ್ದು ಹಾಜಿ, ಎಚ್.ಬಿ.ಟಿ ಅಬ್ದುಲ್ ಸಮಾದ್ ಮುಂತಾದವರು ಈ ಸಂದರ್ಭಗಳಲ್ಲಿ ಉಪಸ್ಥಿತರಿದ್ದರು.​

Comments are closed.