ಕರ್ನಾಟಕ

ರಾಹುಲ್‌ ಗಾಂಧಿ ಟೀಕಿಸಿದ್ದಕ್ಕೆ ಬಿಎಸ್‌ವೈಗೆ ಶಿವಸೇನೆ ಟೀಕೆ

Pinterest LinkedIn Tumblr


ಮುಂಬೈ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆ ವೇಳೆ ಕೋಳಿ ಮಾಂಸ ತಿಂದು ದೇಗುಲ ಪ್ರವೇಶಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಕ್ಷೇಪಿಸಿದ್ದನ್ನು ಶಿವಸೇನೆ ಟೀಕಿಸಿದೆ.

ಚುನಾವಣಾ ಪ್ರಚಾರದ ವೇಳೆ ಅಂಥ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದು ಪಕ್ಷ ಹೊಂದಿರುವ ನಿಲುವು ಮತ್ತು ಬಿಜೆಪಿ ವಿಚಲಿತಗೊಂಡಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಪಕ್ಷದ ಮುಖವಾಣಿ “ಸಾಮ್ನಾ’ದ ಸಂಪಾದಕೀಯದಲ್ಲಿ ಟೀಕಿಸಲಾಗಿದೆ. ಯಾರು, ಯಾವುದನ್ನು ಸೇವಿಸಬೇಕು ಎಂಬ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಬಾರದೂ ಎಂದು ಸಲಹೆ ಮಾಡಿದೆ. ಕಾಂಗ್ರೆಸ್‌ ನಾಯಕತ್ವ ಹಿಂದುತ್ವ ವಿಚಾರ ಕೈಗೆತ್ತಿಕೊಂಡರೆ ಏನಾಗಬಹುದೋ ಎಂಬ ಭೀತಿ ಬಿಜೆಪಿಯನ್ನು ಕಾಡುತ್ತಿದೆ. ಗುಜರಾತ್‌ ಚುನಾವಣೆ ವೇಳೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಿಜೆಪಿಗೆ ನಿದ್ದೆ ರಹಿತ ರಾತ್ರಿಗಳನ್ನು ಸೃಷ್ಟಿಸಿದ್ದರು. ಅದೇ ಮಾದರಿಯನ್ನು ಅವರು ಕರ್ನಾಟಕದಲ್ಲಿ ಬಿಜೆಪಿಗೆ ನೀಡುವ ಸಾಧ್ಯತೆಗಳು ಅಧಿಕವಾಗಿವೆ’ ಎಂದು ಬರೆದುಕೊಳ್ಳಲಾಗಿದೆ. ಹಿಂದೂ ಪರ ಧೋರಣೆ ಅನುಸರಿಸಿ ಬಿಜೆಪಿಗೆ ಕಠಿಣ ಹಾದಿಯನ್ನು ಕಾಂಗ್ರೆಸ್‌ ತೋರಿಸಲಿದೆ. ದೇಗುಲ, ಮಸೀದಿಗಳಿಗೆ ಕಾಂಗ್ರೆಸ್‌ ಅಧ್ಯಕ್ಷ ಭೇಟಿ ನೀಡುವುದು ಕರ್ನಾಟಕದ ಬಿಜೆಪಿ ಧುರೀಣ ಬಿ.ಎಸ್‌ .ಯಡಿಯೂರಪ್ಪಗೆ ಕೋಪ ತರಿಸಿದೆ ಎಂದೂ ಬರೆಯಲಾಗಿದೆ.

-ಉದಯವಾಣಿ

Comments are closed.