ಕರ್ನಾಟಕ

6ನೇ ಬಜೆಟ್ ಮಂಡಿಸುವ ಮೂಲಕ ಹೊಸ ಇತಿಹಾಸ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು, ಫೆ.16- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ 13ನೇ ಹಾಗೂ ಮುಖ್ಯಮಂತ್ರಿಯಾಗಿ 6ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ವಿಧಾನಸಭೆಯಲ್ಲಿಂದು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಆಯವ್ಯಯ ಮಂಡನೆಗೆ ಆಹ್ವಾನ ನೀಡಿದ ಕೂಡಲೇ ಮುಖ್ಯಮಂತ್ರಿ ಅವರ ದಾಖಲೆ ಬಜೆಟ್ ಮಂಡನೆಯನ್ನು ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು.

ಮುಖ್ಯಮಂತ್ರಿ ಅವರು ಆಯವ್ಯಯ 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಮುಂದಾಗುತ್ತಿದ್ದಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್, ಅತಿ ಹೆಚ್ಚು ಬಜೆಟ್ ಮಂಡಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಆಯವ್ಯಯ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ವಿಧಾನಸಭೆಯ ಕೊನೆ ಅಧಿವೇಶನಕ್ಕೆ ನಾವು-ನೀವೆಲ್ಲಾ ಸಾಕ್ಷೀಭೂತರಾಗಿದ್ದೇವೆ. 4 ದಶಕಗಳಲ್ಲಿ 5 ವರ್ಷ ಅವಧಿ ಪೂರ್ಣಗೊಳಿಸುವ ಮೂಲಕ ರಾಜ್ಯದ ಜನತೆಯ ಸುಭದ್ರ ಸರ್ಕಾರದ ಆಶಯವನ್ನು ಸಹಕಾರಗೊಳಿಸಿದ ಹೆಮ್ಮೆ ನಮ್ಮದು ಎಂದು ಹೇಳಿದರು.

ಮುಖ್ಯಮಂತ್ರಿ ಆಗಿ 6ನೇ ಸೇರಿದಮತೆ ಒಟ್ಟು 13 ಆಯವ್ಯಯ ಪತ್ರ ಮಂಡಿಸಿದ ಭಾಗ್ಯ ಒದಗಿ ಬಂದಿರುವುದು ಪ್ರಜಾಪ್ರಭುತ್ವದ ನಿಜವಾದ ಸೌಂದಯ್ಯ. ಸಾಮಾನ್ಯ ರೈತನ ಮಗನಿಗೂ ಇಂಥದೊಂದು ಭಾಗ್ಯ ಒದಗಿದೆ. ಇದಕ್ಕಾಗಿ ದೇಶದ ಸಂವಿಧಾನಕ್ಕೂ ಮತ್ತು ಅದನ್ನು ರೂಪಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೂ ತಲೆ ಬಾಗುತ್ತೇನೆ ಎಂದು ಹೇಳಿದರು.

Comments are closed.