ರಾಷ್ಟ್ರೀಯ

ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೇಳೆ ಕೈಕೊಟ್ಟ ಕರೆಂಟ್; ಮೊಬೈಲ್ ಟಾರ್ಚ್ ಬೆಳಕಿನಲ್ಲಿ ವೈದ್ಯನಿಂದ ಶಸ್ತ್ರ ಚಿಕಿತ್ಸೆ!

Pinterest LinkedIn Tumblr

ಗುಂಟೂರು: ಶಸ್ತ್ರ ಚಿಕಿತ್ಸೆ ಮಧ್ಯೆ ಕರೆಂಟ್ ಕೈಕೊಟ್ಟ ಕಾರಣ ವೈದ್ಯರೊಬ್ಬರು ರೋಗಿಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಆಪರೇಷನ್ ಮುಂದುವರಿಸಿದ ಘಟನೆ ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಆಪರೇಷನ್ ನಡೆಸಿರುವ ವಿಡಿಯೋ ವೈರಲ್ ಆಗಿದೆ.

ಫೆಬ್ರವರಿ 7 ರಂದು ಅಪಘಾತದಲ್ಲಿ ತಲೆಗೆ ಪೆಟ್ಟಾಗಿದ್ದ ಪಲ್ನಾಡಿನ ಪಿ,ವೆಂಕಮ್ಮ ಎಂಬುವರಿಗೆ ಆಪರೇಷನ್ ಮಾಡುತ್ತಿದ್ದರು, ಈ ವೇಳೆ ಆಪರೇಷನ್ ಥಿಯೇಟರ್ ನ ಕರೆಂಟ್ ಕಟ್ ಆಯಿತು. ಬೇರೆ ದಾರಿ ಕಾಣದ ವೈದ್ಯ ಮೊಬೈಲ್ ನ ಫ್ಲಾಶ್ ಲೈಟ್ ಬೆಳಕಿನಲ್ಲಿ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಡಾ. ರಾಜು ನಾಯ್ಡು,ಆಪರೇಷನ್ ನಡೆಸುತ್ತಿರುವಾಗ ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆಯ್ತು. ಹೀಗಾಗಿ ಸೆಲ್ ಫೋನ್ ಬೆಳಕಿನಲ್ಲಿ ಆಪರೇಶನ್ ಮಾಡಲಾಯಿತು. ಇದನ್ನು ವಿಡಿಯೋ ಮಾಡಿ ಲೀಕ್ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

Comments are closed.