ಕರ್ನಾಟಕ

ಒಬಿಸಿ ಮತಬೇಟೆಗೆ ಸಜ್ಜಾಗಿದೆ ಜೆಡಿಎಸ್‌

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ ಹಾಗೂ ಬಿಜೆಪಿ ಹಿಂದು­ಳಿದ ವರ್ಗಗಳ ಮತ ಸೆಳೆಯಲು ನಾನಾ ಕಸರತ್ತುಗಳಲ್ಲಿ ತೊಡಗಿರುವ ಬೆನ್ನಲ್ಲೇ ಜೆಡಿಎಸ್‌ ಸಹ ಓಬಿಸಿ ನಾಯಕರ ತಂಡ ರಚಿಸಿ ಮತಬೇಟೆಗೆ ಬಿಟ್ಟಿದೆ.

ಇದಕ್ಕಾಗಿ ಪಿ.ಜಿ.ಆರ್‌.ಸಿಂಧ್ಯಾ, ಎಚ್‌.ವಿಶ್ವನಾಥ್‌, ಮಧು ಬಂಗಾರಪ್ಪ, ಪ್ರೊ.ಎಚ್‌.ಸಿ.ನೀರಾವರಿ, ರಾಮ­ರಾಜು, ಬಂಡೆಪ್ಪ ಕಾಶಂಪೂರ್‌, ರಮೇಶ್‌ಬಾಬು, ದೇವದಾಸ್‌, ಮಹಾಲಿಂಗಯ್ಯ ಅವರನ್ನೊಳಗೊಂಡ ತಂಡ ರಚಿಸಿದೆ. ಫೆ.23 ರಂದು ಶಿವಮೊಗ್ಗ, 24ರಂದು ಮೈಸೂರು, 25 ರಂದು ಬೆಂಗಳೂರು, 26 ರಂದು ಬೀದರ್‌, 28 ರಂದು ಬೆಳಗಾವಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ.ಜಿ.ಆರ್‌.ಸಿಂಧ್ಯಾ, ಎಚ್‌.ಡಿ.­ದೇವೇಗೌಡರು ಹಾಗೂ ಎಚ್‌.ಡಿ.­ಕುಮಾರಸ್ವಾಮಿ­ಯವರು ಹಿಂದುಳಿದ ವರ್ಗಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ರಾಜ್ಯದ ಜನತೆಗೆ ಆ ಎಲ್ಲ ಅಂಶ ತಿಳಿಸಲು ನಾವು ಪ್ರವಾಸ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗದ ಐವರಿಗೆ ಪ್ರಮುಖ ಖಾತೆ ಕೊಟ್ಟು ಗುರುತಿಸಿದ್ದರು ಎಂದು ತಿಳಿಸಿದರು. ಎಚ್‌.ವಿಶ್ವನಾಥ್‌ ಮಾತನಾಡಿ, ಸಿದ್ದರಾಮಯ್ಯ ತಾವೊಬ್ಬರೇ ಹಿಂದುಳಿದ ವರ್ಗದ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಸಿಎಂ ಆದ ಮೇಲೆ ಅಹಿಂದ ಬಗ್ಗೆ ಧ್ವನಿಯೇ ಎತ್ತಲಿಲ್ಲ ಎಂದು ಹೇಳಿದರು.

-ಉದಯವಾಣಿ

Comments are closed.