ಅಂತರಾಷ್ಟ್ರೀಯ

ಯಂತ್ರವಿಲ್ಲ ಎಂದ ಆಸ್ಪತ್ರೆಗೆ ಯಂತ್ರ ಖರೀದಿಸಿ ಕೊಟ್ಟ ರೋಗಿ!

Pinterest LinkedIn Tumblr


ಆಸ್ಪತ್ರೆಯಲ್ಲಿ ನಿಗದಿತ ಸೌಲಭ್ಯವಿಲ್ಲದಿದ್ದರೆ ನಾವು ಬೇರೆ ಆಸ್ಪತ್ರೆಗೆ ತೆರಳುತ್ತೇವೆ. ಆದರೆ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಇಂಗ್ಲೆಂಡ್‌ನ‌ ಪೀಟರ್‌ಬರ್ಗ್‌ನಲ್ಲಿರುವ ಸ್ಟೀವ್‌ ಬ್ರಿವರ್‌ ವಿಭಿನ್ನವಾಗಿ ಯೋಚಿಸಿದ್ದಾರೆ.

ಈಗಾಗಲೇ ಹಲವು ಸುತ್ತು ಕಿಮೋಥೆರಪಿಯನ್ನು ಪೀಟರ್‌ಬರ್ಗ್‌ ಆಸ್ಪತ್ರೆಯಲ್ಲಿ ಮಾಡಿಸಿಕೊಂಡಿದ್ದ ಸ್ಟೀವ್‌ಗೆ, ಹೆಚ್ಚಿನ ಕೀಮೋಥೆರಪಿ ಮಾಡಬೇಕಾದ ಅಗತ್ಯ ಬಿದ್ದಾಗ ಟ್ರಿಪಲ್‌ ಪಂಪ್‌ಗಳು ಆಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ. ಸಾಮಾನ್ಯ ಪಂಪ್‌ ಗಳಿಗಿಂತ ಅರ್ಧ ಗಂಟೆ ಉಳಿತಾಯ ಈ ಟ್ರಿಪಲ್‌ ಪಂಪ್‌ ಗಳಿಂದ ಆಗುತ್ತವೆ. ಆದರೆ ಇದನ್ನು ಖರೀದಿಸಲು ಆಸ್ಪತ್ರೆ ಬಳಿ ಹಣವಿರಲಿಲ್ಲ. ಇದಕ್ಕಾಗಿ ಸ್ಟೀವ್‌ ಆನ್‌ಲೈನ್‌ನಲ್ಲಿ ಅನುದಾನ ಸಂಗ್ರಹಿಸಿ, ಸೆಕೆಂಡ್‌ ಹ್ಯಾಂಡ್‌ ಪಂಪ್‌ಗಳುನ್ನು ಖರೀದಿಸಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಒಂದು ಟ್ರಿಪಲ್‌ ಪಂಪ್‌ಗೆ 2 ಲಕ್ಷ ರೂ. ಆಗುತ್ತಿತ್ತು. ಆದರೆ ಕೇವಲ 10 ಸಾವಿರಕ್ಕೆ ಸ್ಟೀವ್‌ಗೆ ಲಭ್ಯವಾಗಿದೆ. ಅಲ್ಲದೆ ಇದೇ ರೀತಿ 12 ಪಂಪ್‌ಗಳನ್ನು ಖರೀದಿಸಿ, ಇಷ್ಟೂ ಮೊತ್ತವನ್ನು ಆನ್‌ಲೈನ್‌ ನಲ್ಲೇ ಸಂಗ್ರಹಿಸಿ ಆಸ್ಪತ್ರೆಗೆ ಒದಗಿಸಿದ್ದಾರೆ.

-ಉದಯವಾಣಿ

Comments are closed.