ಕರ್ನಾಟಕ

ಕನ್ನಡ ಧ್ವಜ ಅಂತಿಮವಾಗಿಲ್ಲ: ಉಮಾಶ್ರೀ

Pinterest LinkedIn Tumblr


ಶಿವಮೊಗ್ಗ: ಕನ್ನಡದ ಧ್ವಜದ ಬಗ್ಗೆ ಸಾರ್ವಜನಿಕರ ಚರ್ಚೆ ಬಳಿಕ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಧ್ವಜ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಿದೆ. ಅದರ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸಾರ್ವಜನಿಕರ ಚರ್ಚೆಗೆ ಒಳಪಡಿಸಿ ಬಳಿಕ ಸಚಿವ ಸಂಪುಟದ ಮುಂದೆ ಇಡಲಾಗುತ್ತದೆ ಎಂದರು.

ನಟಿ ರಮ್ಯಾ ಮತ್ತು ನಟ ಜಗ್ಗೇಶ್ ಅವರ ಟ್ವೀಟ್ ಫೈಟ್ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಟ್ವೀಟ್ ಮಾಡುವಾಗ ಪದಗಳ ಬಳಕೆಯಲ್ಲಿ ಹಿಡಿತ ಇರಬೇಕು. ಇಲ್ಲವಾದಲ್ಲಿ ಇಂಥಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇಂಥಹ ಪದಗಳ ಬಳಕೆ ಯಾರ ಘನತೆಗೂ ತಕ್ಕುದಲ್ಲ ಎಂದು ಹೇಳಿದರು.

ರಾಜ್ಯ ಮತ್ತು ಸಿಎಂ ಸಿದ್ದರಾಮಯ್ಯ ಅವರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಪುರಾವೆ, ಅಂಕಿಅಂಶಗಳನ್ನು ಗಮನಿಸದೆ ಮಾತನಾಡಿದ್ದಾರೆ. ದೇಶದ ಪ್ರಧಾನಿಯಾಗಿ ರಾಜ್ಯ ಸರಕಾರವನ್ನು ತೆಗಳುವುದು, ಅಂಕಿ ಅಂಶಗಳಿಲ್ಲದೆ ಆಪಾದನೆಗಳನ್ನು ಮಾಡುವುದು ಸರಿಯಲ್ಲ ಎಂದರು.

Comments are closed.