ಮನೋರಂಜನೆ

ಅಭಿಮಾನಿ ರೆಸ್ಟೋರೆಂಟ್‌ನಲ್ಲಿ ಶ್ರೀದೇವಿ ಸಿನಿಮಾ ಹೆಸರಿನ ತಿಂಡಿಗಳು

Pinterest LinkedIn Tumblr


ನಟಿ ಶ್ರೀದೇವಿ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ. ಈಗಲೂ ಅವರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿ ಬಳಗವಿದೆ. ಚೆನ್ನೈನ ಅಭಿಮಾನಿಯೊಬ್ಬರು ಈಗ ರೆಸ್ಟೋರೆಂಟ್ ಒಂದನ್ನು ಆರಂಭಿಸುತ್ತಿದ್ದು ಅದರಲ್ಲಿನ ತಿಂಡಿಗಳಿಗೆ ಶ್ರೀದೇವಿ ಅಭಿನಯದ ಹೆಸರುಗಳನ್ನು ಇಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಇದರ ಉದ್ಘಾಟನೆಗೆ ಸ್ವತಃ ಶ್ರೀದೇವಿ ಅವರನ್ನೇ ಕರೆಸುತ್ತಿದ್ದಾರೆ ಆ ಅಭಿಮಾನಿ. ಇದರಲ್ಲಿರುವ ಎಲ್ಲಾ ಅಡುಗೆ, ತಿಂಡಿಗಗಳಿಗೆ ಶ್ರೀದೇವಿ ಅಭಿನಯದ ಹಿಂದಿ ಚಿತ್ರಗಳ ಹೆಸರನ್ನು ಇಟ್ಟಿರುವುದು ವಿಶೇಷ. ರೆಸ್ಟೋರೆಂಟ್ ಮುಂದೆ ದೊಡ್ಡ ಬ್ಯಾನರ್ ಹಾಕಿ ಶ್ರೀದೇವಿ ಅವರನ್ನು ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಈ ಅಭಿಮಾನಿ.

‘ಶ್ರೀದೇವಿ ಅವರಿಗೆ ಇದರ ಉದ್ಘಾಟನಾ ಪತ್ರ ತಲುಪಿದೆಯಂತೆ. ಆದರೆ ಅದರಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದಿವೆ ಮೂಲಗಳು. ಈ ರೆಸ್ಟೋರೆಂಟ್ ಉದ್ಘಾಟಿಸಲು ಚೆನ್ನೈಗೆ ಬರುತ್ತಾರಾ ಶ್ರೀದೇವಿ ಎಂಬುದನ್ನು ಕಾದುನೋಡಬೇಕು.

Comments are closed.