ಕಸ್‌ಗಂಜ್, ಉತ್ತರ ಪ್ರದೇಶ : ಗಣರಾಜ್ಯೋತ್ಸವ ದಿನದಂದು ನಡೆದ ಮೆರವಣಿಗೆಯ ವೇಳೆ ಹತ್ಯೆಗೀಡಾಗಿದ್ದ ಚಂದನ್ ಗುಪ್ತಾ ಅವರನ್ನು ಕೊಲ್ಲಲು ಉಪಯೋಗಿಸಲಾಗಿದ್ದ ಪಿಸ್ತೂಲನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಮುಖ್ಯ ಆರೋಪಿ ಸಲೀಂ ಕೊಟ್ಟ ಮಾಹಿತಿಯ ಪ್ರಕಾರ ಹತ್ಯೆಗೆ ಬಳಸಲಾಗಿದ್ದ ನಾಡ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಸುಪರಿಂಟೆಂಡೆಂಟ್ ಪಿಯೂಷ್ ಶ್ರೀವಾಸ್ತವ ತಿಳಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್ ಪಿ ಸಿಂಗ್ ಅವರ ನಿರ್ದೇಶದ ಪ್ರಕಾರ ಸಲೀಂ ಗೆ ನೀಡಲಾಗಿದ್ದ ಎರಡು ಬಂದೂಕು ಲೈಸನ್ಸನ್ನು ಅಮಾನತು ಮಾಡಲಾಗಿದೆ ಎಂದವರು ಹೇಳಿದರು.
-ಉದಯವಾಣಿ