ಕರ್ನಾಟಕ

ಮಂದಿರ ಮಠಕ್ಕೆ ನಿಯಂತ್ರಣ: ಸಿದ್ದಗಂಗಾ ಕಿರಿಯ ಶ್ರೀಗಳ ವಿರೋಧ

Pinterest LinkedIn Tumblr


ತುಮಕೂರು: ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ಒಳ ಪಡಿಸುವ ಪ್ರಸ್ತಾವಕ್ಕೆ ಸಿದ್ದಗಂಗಾ ಕಿರಿಯ ಶ್ರೀಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಠದಲ್ಲಿ ಕಿರಿಯ ಶ್ರೀಗಳು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮಠ-ಮಾನ್ಯಗಳನ್ನು ನಿಯಂತ್ರಿಸಲು ಸಲು ಸಾಧ್ಯವಿಲ್ಲ. ಯಾಕಂದ್ರೆ ಮಠಗಳಿಗೆ ತನ್ನದೆ ಆದ ಅಸ್ತಿತ್ವ ಇದೆ. ಆಚಾರ ವಿಚಾರ ಇದೆ. ಹಾಗಾಗಿ ಎಲ್ಲವನ್ನೂ ಒಂದೇ ತೆಕ್ಕೆಗೆ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಠಗಳಿಗೆ ತನ್ನದೆ ಆದ ಸ್ವಾತಂತ್ರ್ಯ ಇದೆ. ರಾಜ್ಯದ ಎಲ್ಲಾ ಮಠದ ಸ್ವಾಮಿಗಳು ಒಂದೆಡೆ ಚರ್ಚೆ ಮಾಡುತ್ತೇವೆ. ಈ ಹಿಂದೆಯೂ ಈ ಕಾಯಿದೆಗೆ ವಿರೋಧ ವ್ಯಕ್ತವಾಗಿತ್ತು ಎಂದು ಅವರು ಹೇಳಿದರು.

ಮತ್ತೆ ಮಠಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ತರುವುದು ಉಚಿತವಲ್ಲ ಎಂದು ಭಾವಿಸುತ್ತೇನೆ. ಎಲ್ಲಾ ಮಠಾಧೀಶರು ಕುಂತು ಚರ್ಚೆ ನಡೆಸಿ ಸರ್ಕಾರಕ್ಕೆ ಸಲಹೆ ನೀಡುತ್ತೇವೆ ಎಂದು ಕಿರಿಯ ಶ್ರೀಗಳು ಹೇಳಿದರು.

Comments are closed.