ಕರ್ನಾಟಕ

ಹೆಂಡತಿ ಕೊಲೆ ಗಂಡನಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr


ದೇವನಹಳ್ಳಿ: 2015ರಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಗಂಡನಿಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ದೇವನಹಳ್ಳಿ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ದೇವನಹಳ್ಳಿ ಪಟ್ಟಣದ ನಿವಾಸಿ ಶಬ್ಬೀರ್‌ ಪಾಷಾ ಶಿಕ್ಷೆಗೆ ಗುರಿಯಾಗಿದ್ದು, ನ್ಯಾಯಾಧೀಶ ಎಂ.ಎನ್‌ ಶಂಶಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

2015ರಲ್ಲಿ ಶಬ್ಬೀರ್‌ ಪಾಷಾ ಚಿಕ್ಕಬಳ್ಳಾಪುರ ನಿವಾಸಿ ಹರ್ಷಿಯಾ ಖಾನ್‌ ಎಂಬ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ದೇವನಹಳ್ಳಿ ಪಟ್ಟಣದ ಸಂತಾನಪ್ಪನ ಬಿಲ್ಡಿಂಗ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮದುವೆ ನಂತರ 7 ತಿಂಗಳ ಕಾಲ ಸಂಸಾರ ನಡೆಸಿ ಬಳಿಕ ಹರ್ಷಿಯಾ ಖಾನ್‌ಳ ಶೀಲದ ಬಗ್ಗೆ ಸಂಶಯ ವ್ಯಕ್ತ ಪಡಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಳ ನೀಡುತ್ತಿದ್ದ ಎನ್ನಲಾಗಿದೆ.

ಒಮ್ಮೆ ಹರ್ಷಿಯಾಖಾನ್‌ ಅವರ ತಂದೆ ತಾಯಿಗೆ ನಿಮ್ಮ ಮಗಳನ್ನು ಕರೆದು ಹೋಗಿ ಇಲ್ಲವಾದಲ್ಲಿ ಅವಳನ್ನು ಸಾಯಿಸಿ ಜೈಲಿಗೆ ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಭಯಭೀತರಾದ ತಂದೆ ತಾಯಿ ಮತ್ತು ಸಂಬಂಧಿಕರು ಶಬ್ಬೀರ್‌ನನ್ನು ಚಿಕ್ಕಬಳ್ಳಾಪುರದ ಮಸೀದಿಯಲ್ಲಿ ಗಂಡ ಹೆಂಡತಿಯ ನ್ಯಾಯ ಪಂಚಾಯಿತಿ ಮಾಡಿಸಿದ್ದರು. ನ್ಯಾಯ ನಡೆದ 9 ದಿನಗಳ ನಂತರ ದೇವನಹಳ್ಳಿ ಪಟ್ಟಣದಲ್ಲಿ ವಾಸವಾಗಿದ್ದ ಮನೆಯಲ್ಲಿ ಬೆಳಗ್ಗೆ ಹರ್ಷಿಯಾ ಖಾನ್‌ಳÜ ಎದೆಯ ಮೇಲೆ ಕುಳಿತು ಕತ್ತು ಹಿಸುಕಿ ಉಸಿರು ಗಟ್ಟುವಂತೆ ಮಾಡಿ ಕೊಲೆ ಮಾಡಿದ್ದಾನೆ. ಪ್ರಕರಣವನ್ನು ದಾಖಲಿಸಿಕೊಂಡ ದೇವನಹಳ್ಳಿ ಪಟ್ಟಣದ ಪೊಲೀಸರು ಕೊಲೆ ನಡೆದ ದಿನವೇ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ನ್ಯಾಯಾಲಯ ಜೀವಾವಧಿ ಶಿಕ್ಷೆಯೊಂದಿಗೆ 20 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

Comments are closed.