ಹೊಸದಿಲ್ಲಿ : 2015-17ರಲ್ಲಿ ದೇಶದಲ್ಲಿ ಪತ್ರಕರ್ತರ ಮೇಲೆ ನಡೆದಿದ್ದ 90 ದಾಳಿ ಪ್ರಕರಣಗಳಲ್ಲಿ 108 ಮಂದಿಯನ್ನು ಬಂಧಿಸಲಾಗಿದೆ.
ಕಳೆದ ಮೂರು ವರ್ಷಗಳಿಗೆ ಸಂಬಂಧಿಸಿದ ಈ ಅಂಕಿ ಅಂಶಗಳನ್ನು ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಸಂಗ್ರಹಿಸಿದೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ಹಂಸರಾಜ್ ಆಹಿರ್ ರಾಜ್ಯಸಭೆಗೆ ತಿಳಿಸಿದರು.
2017ರಲ್ಲಿ ಪತ್ರಕರ್ತರ ಮೇಲಿನ 15 ಪ್ರಕರಣಗಳು ದಾಖಲಾಗಿದ್ದು 26 ಮಂದಿಯನ್ನು ಬಂಧಿಸಲಾಗಿದೆ ಎಂದವರು ಹೇಳಿದರು.
ರಾಜಸ್ಥಾನದಲ್ಲಿ ನಡೆದಿದ್ದ ಪತ್ರಕರ್ತರ ಮೇಲಿನ ದಾಳಿಗೆ ಸಂಬಂಧಪಟ್ಟು 22 ಮಂದಿಯನ್ನು ಬಂಧಿಸಲಾಗಿದೆ. ತ್ರಿಪುರದಲ್ಲಿ ಒಬ್ಬ ವ್ಯಕ್ತಿಯನ್ನು ಸೆರೆ ಹಿಡಿಯಲಾಗಿದೆ ಎಂದು ಸಚಿವ ಆಹಿರ್ ಹೇಳಿದರು.
-ಉದಯವಾಣಿ