ಕರ್ನಾಟಕ

​ಬೆಂಗಳೂರು ರಸ್ತೆಗೆ ಮಹಿಳಾಸ್ನೇಹಿ ಪಿಂಕ್‌ ಆಟೊ

Pinterest LinkedIn Tumblr


ಬೆಂಗಳೂರು: ಮಾರ್ಚ್‌ ಕೊನೆಯಲ್ಲಿ 500 ಪಿಂಕ್‌ ಆಟೊಗಳು ನಗರದ ರಸ್ತೆಗಿಳಿಯಲಿವೆ. ಈ ಆಟೊಗಳಲ್ಲಿ ಸಿಸಿಟಿವಿ ಕ್ಯಾಮೆರಾ ಜತೆ ಜಿಪಿಎಸ್‌ ಟ್ರ್ಯಾಕರ್‌ ಕೂಡ ಇರಲಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ವೆಲ್‌ಫೇರ್‌ ಸ್ಕೀಮ್‌ನಡಿ ಈ ಆಟೊಗಳನ್ನು ಸೇವೆಗೆ ಬಿಡುತ್ತಿದೆ.

ಪ್ರತಿ ಆಟೊಗೆ 80,000 ರೂ. ಸಬ್ಸಿಡಿ ನೀಡಲಾಗುತ್ತಿದ್ದು, ಉಳಿದ ಮೊತ್ತವನ್ನು ಫಲಾನುಭವಿ ಭರಿಸಬೇಕು. ಈ ಆಟೊಗಳಲ್ಲಿ ಕಾರ್ಯ ನಿರ್ವಹಿಸಲಿರುವ ಪುರುಷ ಚಾಲಕರಿಗೆ ಮಹಿಳಾ ಪ್ರಯಾಣಿಕರ ಜತೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುವುದು ಎಂದು ಬಿಬಿಎಂಪಿಯ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್‌ ರಕೀಬ್‌ ಜಾಕಿರ್‌ ಹೇಳಿದ್ದಾರೆ.

ಆಟೊ ಪಾರ್ಕಿಂಗ್‌ನಲ್ಲಿ ಶೇ 20% ರಷ್ಟು ಮಹಿಳೆಯರಿಗೆ ಮೀಸಲಿಡಲಾಗುವುದು. ಮಹಿಳಾ ಸ್ನೇಹಿ ಕಾರ್ಯಕ್ರಮಗಳಿಗೆ ಪಿಂಕ್‌ ಆಟೊ ಹೊಸ ಸೇರ್ಪಡೆ, ಮೊದಲ ಹಂತದಲ್ಲಿ ಬರುವ ಪ್ರತಿಕ್ರಿಯೆ ಪರಿಗಣಿಸಿದ ಬಳಿಕ ವಿಸ್ತರಣೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮೇಯರ್‌ ಸಂಪತ್‌ ರಾಜ್‌ ಪ್ರಕಟಿಸಿದ್ದಾರೆ.

Comments are closed.