ರಾಷ್ಟ್ರೀಯ

ಜಿಎಸ್‌ಟಿ, ನೋಟ್‌ಬ್ಯಾನ್‌ನಿಂದ ತೆರಿಗೆದಾರರ ಸಂಖ್ಯೆ ಹೆಚ್ಚಳ: ಆರ್ಥಿಕ ಸಮೀಕ್ಷೆ

Pinterest LinkedIn Tumblr


ಹೊಸದಿಲ್ಲಿ: ನೋಟ್‌ ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದಾಗಿನಿಂದ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದೆ.

ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಈ ವರದಿ ನೀಡಲಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.

ಆರ್ಥಿಕ ಸುಧಾರಣೆಯ ಕ್ರಮಗಳಿಂದಾಗಿ ಉಳಿತಾಯ ಕೂಡ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಭಾರತೀಯ ಆರ್ಥಿಕತೆಯಲ್ಲಿ ಜಿಎಸ್‌ಟಿ ಮಹತ್ವವದ ನಿರ್ಧಾರವಾಗಿದೆ. ಇದರಿಂದಾಗಿ ತೆರಿಗೆದಾರರ ಸಂಖ್ಯೆಯನ್ನು ಶೇಕಡ 50ರಷ್ಟು ಹೆಚ್ಚಾಗಿದೆ. 2016ರ ನವೆಂಬರ್‌ ನಂತರ 18 ಲಕ್ಷ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದೆ.

ನೋಟು ಅಮಾನ್ಯೀಕರಣ ನಂತರ ಉಳಿತಾಯ ಕೂಡ ಪ್ರಗತಿ ಕಂಡಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

Comments are closed.