
ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮಾಜಿ ಸಚಿವ ಬಿ. ಶಿವರಾಮು ಅವರು ವಾಗ್ದಾಳಿ ನಡೆಸಿದ್ದು, ಅವರ ಅವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಬಿ. ಶಿವರಾಮು ಅವರು ಡಿಸಿ ವಿರುದ್ಧ ಆರೋಪ ಮಾಡಿದ್ದಾರೆ.
ಇವರ ಅವಧಿಯಲ್ಲಿ ಒಂದೇ ಒಂದು ಜನತಾ ದರ್ಶನ ಮಾಡಿಲ್ಲ. ಇವರು ದಕ್ಷರಾ? ಪ್ರಾಮಾಣಿಕರಾ? ಮಸ್ತಕಾಭಿಷೇಕ ಕೆಲಸ ಮಾಡುತ್ತಿರುವವರು ಇವರು ಒಬ್ಬರೇನಾ? ಇವರ ವಿರುದ್ಧ ತನಿಖೆಗೆ ಗೃಹ ಸಚಿವರಿಗೆ ದಾಖಲೆ ನೀಡುತ್ತೇನೆ ಎಂದು ಶಿವರಾಮು ಅವರು ಡಿಸಿ ವಿರುದ್ಧ ಆರೋಪ ಮಾಡಿದರು.
ಇಂಥ ಜಿಲ್ಲಾಧಿಕಾರಿಯನ್ನು ವರ್ಗ ಮಾಡಿದ್ದು ಸರಿ ಎಂದು ಸರ್ಕಾರದ ಕ್ರಮವನ್ನು ಮಾಜಿ ಸಚಿವ ಸಮರ್ಥಿಸಿಕೊಂಡರು.
ಡಿಸಿ ವರ್ಗಾವಣೆಗಾಗಿ ಉಸ್ತುವಾರಿ ಸಚಿವ ಎ.ಮಂಜು ಮತ್ತು ಸಿಎಂ ಮೇಲೆ ಒತ್ತಡ ಹಾಕಿದ್ದು ನಿಜ ಎಂದು ಶಿವರಾಮು ತಮ್ಮ ಬೆಂಬಲಿಗನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.
Comments are closed.