
ಹೊಸದಿಲ್ಲಿ: ಭಾರತದಲ್ಲಿ ಇಂದು ತೆರೆ ಕಂಡಿರುವ ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ “ಪದ್ಮಾವತ್’ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಪಾಕಿಸ್ಥಾನದಲ್ಲಿ ಪದ್ಮಾವತ್ ಚಿತ್ರ ಬಿಡುಗಡೆಯ ಹಾದಿ ಸುಗಮವಾಗಿದ್ದು ಅಲ್ಲಿನ ಸೆನ್ಸಾರ್ ಮಂಡಳಿ ಅನುಮತಿ ನೀಡಿದೆ.
“ಪದ್ಮಾವತ್’ ಚಿತ್ರ ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯವೆಂದು ಪರಿಗಣಿಸಲಾಗಿದ್ದು ಸೆನ್ಸಾರ್ ಮಂಡಳಿ ಯಾವುದೇ ಕಟ್ ಸೂಚಿಸಿಲ್ಲ ಎಂದು ಇಸ್ಲಾಮಾಬಾದ್ ನಿಂದ ಸಾಮಾಜಿಕ ಮಾಧ್ಯಮದ ಮೂಲಕ ಮೊಬಾಶೀರ್ ಹುಸೇನ್ ಅವರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಪಾಕಿಸ್ಥಾನದಲ್ಲಿ ಪದ್ಮಾವತ್ ಚಿತ್ರಕ್ಕೆ ಯು ಸರ್ಟಿಫಿಕೇಟ್ ನೀಡಲಾಗಿದೆ. ಅಲ್ಲಿನ ಚಿತ್ರ ವಿತರಕರ ಪ್ರಕಾರ ಅಲ್ಲಾವುದ್ದೀನ್ ಖೀಲ್‌ಜಿಯನ್ನು ಚಿತ್ರದಲ್ಲಿ ನೇತ್ಯಾತ್ಮಕವಾಗಿ ಬಿಂಬಿಸಲಾಗಿರಬಹುದೆಂಬ ಭಯ ಇತ್ತು; ಆದರೆ ಪಾಕ್ ಸೆನ್ಸಾರ್ ಮಂಡಳಿ ಕಲೆ, ಸೃಜನಾತ್ಮಕತೆ ಮತ್ತು ಆರೋಗ್ಯಕರ ಮನೋರಂಜನೆಯ ಬಗ್ಗೆ ಯಾವುದೇ ಪೂರ್ವಾಗ್ರಹ ಹೊಂದಿಲ್ಲ ಎಂದು ಮೊಬಾಶಿರ್ ಹುಸೇನ್ ಹೇಳಿರುವುದನ್ನು ವರದಿ ಉಲ್ಲೇಖೀಸಿದೆ.
-ಉದಯವಾಣಿ
Comments are closed.