ಕರ್ನಾಟಕ

ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ: ಪ್ರತಿಭಟನೆಗಿಳಿದ ವಿಪಕ್ಷಗಳು, ಗರಂ ಆದ ಗೌಡ್ರು

Pinterest LinkedIn Tumblr


ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಜಿಲ್ಲೆಯೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ, ಜೆಡಿಎಸ್​ ಪಕ್ಷಗಳು ಕೂಡ ಇದಕ್ಕೆ ವಿರೋಧಿಸಿ ಪ್ರತಿಭಟನೆಗಿಳಿದಿವೆ.

ವರ್ಗಾವಣೆಯಲ್ಲಿ ಕಾಂಗ್ರೆಸ್‌ ಕೈವಾಡ ಇದೆ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಭಾರಿ ವೆಚ್ಚದ ಮಹಾಮಸ್ತಾಕಭೀಷೇಕಕ್ಕೆ ವರ್ಗಾವಣೆ ಲಿಂಕ್ ಇದೆಯಾ ಅನ್ನುವ ಅನುಮಾನ ಕೂಡ ಮೂಡಿ ಬಂದಿದೆ. ಇಷ್ಟೇ ಅಲ್ಲದೆ, ಕೆಲ ದಿನಗಳ ಹಿಂದೆ ಹಾಸನ ಕಾಂಗ್ರೆಸಿಗರು ಕೊಟ್ಟ ದೂರಿಗೆ ಸಿಎಂ ಸಿದ್ದರಾಮಯ್ಯ ಮಣಿದು ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ವರ್ಗಾವಣೆ ಖಂಡಿಸಿ ವಿಪಕ್ಷಗಳು ರೋಹಿಣಿ ಪರ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಆದರೆ, ವರ್ಗಾವಣೆಯನ್ನು ಸಮರ್ಥಿಸಿಕೊಂಡಿರುವ ಸಿಎಂ, ಆಡಳಿತ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಅಂತಾ ಹೇಳಿದ್ದಾರೆ. ಸರ್ಕಾರದ ನಡೆಗೆ ಮಾಜಿ ಪ್ರಧಾನಿ ದೇವೇಗೌಡ ಗರಂ ಆಗಿದ್ದು, ಶ್ರವಣಬೆಳಗೊಳದಲ್ಲಿ ನಡೆಯುವ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ.

ಈ ಮಧ್ಯೆ ಜೆಡಿಎಸ್‌ ಪ್ರತಿಭಟನೆ ಹತ್ತಿಕ್ಕಲು ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಮೌಖಿಕ ಆದೇಶ ಹೊರಡಿಸಿದ್ದು, ಹೊಸಬರು ಕೂಡಲೇ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಿ ಎಂದು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

Comments are closed.