ಮನೋರಂಜನೆ

ಬಿಗ್‌ಬಾಸ್: ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ಟಾಪ್‌ 5 ತಲುಪಿದ ಇಬ್ಬರು ಸಾಮಾನ್ಯರು

Pinterest LinkedIn Tumblr


ಬಿಗ್‌ಬಾಸ್ ಸೀಸನ್ 5 ಮುಕ್ತಾಯ ಹಂತಕ್ಕೆ ಬಂದಿದೆ. 100ನೇ ದಿನ ಸಮೀರ್ ಆಚಾರ್ಯ ಔಟ್‌ ಆಗುವುದರೊಂದಿಗೆ ಟಾಪ್‌ 5 ಸ್ಪರ್ಧಿಗಳು ಫಿನಾಲೆ ತಲುಪಿದ್ದಾರೆ.

ಈ ಟಾಪ್‌ 5 ಸ್ಪರ್ಧಿಗಳಲ್ಲಿ ಇಬ್ಬರು ಸಾಮಾನ್ಯರು ಉಳಿದಿರುವುದೇ ವಿಶೇಷ. ನಿವೇದಿತಾ ಹಾಗೂ ದಿವಾಕರ್‌ ಸಾಮಾನ್ಯರಾಗಿ ಬಿಗ್‌ಬಾಸ್‌ ಮನೆಗೆ ಬಂದ ದಿವಾಕರ್‌ ಹಾಗೂ ನಿವೇದಿತಾ ಗೌಡ ಸೆಲೆಬ್ರಿಟಿ ವರ್ಚಸ್ಸು ಇರುವವರನ್ನು ಮೀರಿಸಿ, ವೀಕ್ಷಕರ ಮನಗೆದ್ದು ಫಿನಾಲೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ದಿವಾಕರ್ ಹಾಗೂ ನಿವೇದಿತಾ ತಮ್ಮ ನಡೆ-ನುಡಿಗಳಿಂದಲೇ ವೀಕ್ಷಕರನ್ನು ನಗಿಸಿ ಅವರ ಮನಸ್ಸಿಗೆ ಹತ್ತಿರವಾದರು. ದಿವಾಕರ್‌ ಅವರು ಒಮ್ಮೆ ನೇರ ನುಡಿಯಿಂದ ಗಮನ ಸೆಳೆದರೆ, ಮತ್ತೊಮ್ಮೆ ತಮ್ಮಲ್ಲಿನ ಅಭಿನಯ ಕೌಶಲ್ಯದಿಂದ ನೋಡುಗರನ್ನು ರಂಜಿಸುತ್ತಿದ್ದರು. ಟಾಸ್ಕ್‌ ಎಂದರೆ ಸದಾ ಹಿಂದೆ ಬೀಳುತ್ತಿದ್ದ ನಿವೇದಿತಾ ಗೌಡ ಇಡ್ಲಿ ತಿನ್ನುವ ಸ್ಪರ್ಧೆ, ಗೋಡೆಗೆ ಅಂಟಿಕೊಂಡು ನಿಲ್ಲುವ ಸ್ಪರ್ಧೆ, ದಿವಾಕರ್ ಪತ್ನಿ ಬಿಗ್‌ಬಾಸ್‌ ಮನೆಗೆ ಭೇಟಿ ನೀಡಿದಾಗ ಏತದ ಮೇಲಿನ ಮಡಿಕೆ ಬೀಳದಂತೆ ನಿಭಾಯಿಸಿದ ರೀತಿ ಇವೆಲ್ಲಾ ಅವರಿಗೆ ಪ್ಲಸ್‌ ಪಾಯಿಂಟ್‌ಗಳಾದವು.

ನಿವೇದಿತಾ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡದಿದ್ದರೂ ವಾರದಿಂದ-ವಾರಕ್ಕೆ ಅವರು ಸುಧಾರಿಸಿಕೊಳ್ಳುತ್ತಿದ್ದ ರೀತಿ, ನೇರ ನುಡಿ ಹಾಗೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದಾಗಿ ವೀಕ್ಷಕರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾದರು.

ಉಳಿದಂತೆ ಚಂದನ್‌ ಶೆಟ್ಟಿ, ಜಯರಾಂ ಕಾರ್ತಿಕ್‌, ಶ್ರುತಿ ಪ್ರಕಾಶ್‌ ಸೆಲೆಬ್ರಿಟಿಗಳಾಗಿ ಮನೆಯೊಳಗೆ ಬಂದು ತಮ್ಮ ನಡುವಳಿ, ಪ್ರತಿಭೆಯಿಂದ ಮತ್ತಷ್ಟು ಅಭಿಮಾನಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಟಾಪ್ 5 ಸ್ಪರ್ಧಿಗಳಲ್ಲಿ ಟಾಪ್‌ 3 ಲಿಸ್ಟ್‌ನಲ್ಲಿ ಯಾರ ಹೆಸರು ಬರಲಿದೆ ಎಂಬುವುದನ್ನು ವೀಕ್ಷಕರು ನಿರ್ಧರಿಸಲಿದ್ದಾರೆ.

Comments are closed.