
ಮಂಡ್ಯ: ಕೆ.ಎಂ.ದೊಡ್ಡಿ ಸಮೀಪದ ಕೊಕ್ಕರೆ ಬೆಳ್ಳೂರಿನಲ್ಲಿ ಮತ್ತೆ ಮೂರು ಪೆಲಿಕಾನ್ (ಹೆಜ್ಜಾರ್ಲೆ) ಗಳು ಸೋಮವಾರ ಮೃತಪಟ್ಟಿದ್ದು, ಗ್ರಾಮಸ್ಥರು ಹಾಗೂ ಪಕ್ಷಿ ಪ್ರಿಯರಲ್ಲಿ ಆತಂಕ ಮನೆ ಮಾಡಿದೆ.
ಕೊಕ್ಕರೆ ಬೆಳ್ಳೂರು, ಮಾದರಹಳ್ಳಿ ಸೂಳೆಕೆರೆ ಬಳಿ ಇದುವರೆಗೆ ಮೃತಪಟ್ಟ ಕೊಕ್ಕರೆಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಕಳೆದ 2 ತಿಂಗಳಿಂದ ನಿರಂತರವಾಗಿ ಕೊಕ್ಕರೆಗಳು ಸಾಯುತ್ತಿದ್ದು, ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.
ಬೆಳ್ಳೂರಿನಲ್ಲಿ ಮುಂದುವರಿದ ಕೊಕ್ಕರೆಗಳ ಸಾವು; ಹಕ್ಕಿ ಜ್ವರದ ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು
ಹಸಿವಿನಿಂದ ಅಥವಾ ಯಾವುದೋ ಕಾಯಿಲೆಯಿಂದ ಸಾಯುತ್ತಿರಬಹುದೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರದಿಂದ ಮತ್ತಷ್ಟು ಆತಂಕ ಹೆಚ್ಚಾಗಿತ್ತು. ಅರಣ್ಯ ಇಲಾಖೆ ಈ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿರುವುದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
Comments are closed.