ಕರ್ನಾಟಕ

ದೊಡ್ಡಪ್ಪನಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾದ ಬುದ್ಧಿಮಾಂದ್ಯ ಯುವತಿ

Pinterest LinkedIn Tumblr


ಬೆಂಗಳೂರು: ಬುದ್ಧಿಮಾಂದ್ಯ ಯುವತಿಯೊಬ್ಬಳು ದೊಡ್ಡಪ್ಪನಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾಗಿರುವ ಅಮಾನವೀಯ ಘಟನೆ ಹೊಸಕೋಟೆ ತಾಲೂಕಿನ ನೀಡಘಟ್ಟದಲ್ಲಿ ನಡೆದಿದೆ.

ಎಜಾಜ್ ಪಾಷ(51) ಅತ್ಯಾಚಾರ ಎಸಗಿದ ಆರೋಪಿ. ವೃದ್ಧ ದಂಪತಿ ಕೂಲಿ ಕೆಲಸಕ್ಕೆ ಹೋದ ನಂತರ ಪಕ್ಕದ ಮನೆಯಲ್ಲಿದ್ದ ಈತ ಯುವತಿ ಮೇಲೆ ದೌರ್ಜನ್ಯ ನಡೆಸಿದ್ದಾನೆ.

ಅಸ್ವಸ್ಥಗೊಂಡ ಯುವತಿಯನ್ನ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ದೌರ್ಜನ್ಯದಿಂದಾಗಿ ಯುವತಿ 8 ತಿಂಗಳ ಗರ್ಭಿಣಿಯಾಗಿದ್ದಾಳೆ.

ಲೋಕ ಜ್ಞಾನವಿಲ್ಲದ ಬುದ್ದಿಮಾಂದ್ಯ ಮಗಳು 8 ತಿಂಗಳ ಗರ್ಭಿಣಿಯಾಗಿರುವುದನ್ನು ಕಂಡು ವೃದ್ಧ ದಂಪತಿ ಕಣ್ಣೀರುಡುತ್ತಿದ್ದಾರೆ. ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.