
ಬಳ್ಳಾರಿ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮ ವಿರೋಧಿಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು ಬೊಗಳುವ ನಾಯಿಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಬಳ್ಳಾರಿಯಲ್ಲಿ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ಕೌಶಲ್ಯ ಉದ್ಯಮಶೀಲ ನಿಗಮ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ ಅವರು, ನಾವು ಹೇಳಿ ಕೇಳಿ ಹಠವಾದಿಗಳು. ಯಾವುದೋ ರಸ್ತೆಯಲ್ಲಿರುವ ನಾಯಿ ಬೊಗಳಿದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಆಕ್ರೋಶ ಭರಿತರಾಗಿ ಮಾತನಾಡಿದರು.
ಇಲ್ಲಿ ನಾನು ಮತ ಕೇಳಲು ಬಂದಿಲ್ಲ. ಭಾಷಣ ಮಾಡಲು ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಲು ಬಂದಿದ್ದೇನೆ. ನಮಗೆ ಈ ಮಣ್ಣಿನ ಬಗ್ಗೆ, ಇಲ್ಲಿನ ಧರ್ಮದ ಗೌರವವಿದೆ ಎಂದರು.
ಇನ್ನು ಬಳ್ಳಾರಿಯಲ್ಲಿ ಕೌಶಲ್ಯ ಅಭಿವೃದ್ಧಿ ವಿವಿ ತೆರೆಯಲು ಮುಂದಾಗಿದ್ದು ಜಮೀನು ನೀಡಲು ಯಾರಾದರೂ ಮುಂದೆ ಬಂದರೆ ನಾವು ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದರು.
Comments are closed.