
ಮೈಸೂರು/ಎಚ್.ಡಿ.ಕೋಟೆ:ಬಿಜೆಪಿ, ಆರ್ ಎಸ್ ಎಸ್ ಹಾಗೂ ಬಜರಂಗದಳ ಒಂಥರ ಉಗ್ರಗಾಮಿಗಳೇ ಎಂದು ನೀಡಿರುವ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ, ಪದೇ ಹೇಳಿಕೆಯನ್ನು ಬದಲಿಸುವ ಮೂಲಕ ಉಲ್ಟಾ ಹೊಡೆದಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರು ಉಗ್ರಗಾಮಿ ಎಂಬ ಹೇಳಿಕೆ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ ಕುರಿತು ಪ್ರಶ್ನಿಸಿದಾಗ, ನಾನು ಉಗ್ರಗಾಮಿ ಸಂಘಟನೆ ಎಂದು ಹೇಳಿಲ್ಲ. ಬಿಜೆಪಿಯವರು ಹಿಂದುತ್ವದ ಉಗ್ರವಾದಿಗಳು ಎಂದು ಹೇಳಿರುವುದಾಗಿ ಸಮಜಾಯಿಷಿ ನೀಡಿದರು.
ಬಳಿಕ ಎಚ್ ಡಿ ಕೋಟೆ ಸರಗೂರಿನಲ್ಲಿಯೂ ಪತ್ರಕರ್ತರು ಪ್ರಶ್ನಿಸಿದಾಗ, ಆರ್ ಎಸ್ ಎಸ್ ಉಗ್ರಗಾಮಿ ಸಂಘಟನೆ ಎಂದು ಹೇಳಿಲ್ಲ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳಬೇಕು. ಆರ್ ಎಸ್ ಎಸ್ ಉಗ್ರವಾದಿ ಎಂದು ಹೇಳಿದ್ದೆ.
ನಾನು ಹಿಂದೂವೇ, ಆದರೆ ಮನುಷ್ಯತ್ವ ಇರುವ ಹಿಂದು. ಕೆಲವರಿಗೆ ಮನುಷ್ಯತ್ವವೇ ಇಲ್ಲ. ಆದ್ರೆ ಹಿಂದೂ ಸಂಘಟನೆಯಲ್ಲಿರುವವರ ರೀತಿ ರಾಕ್ಷಸಿ ಪ್ರವೃತ್ತಿಯವರಲ್ಲ ಎಂದು ಹೇಳಿದರು.
Comments are closed.