ಕರ್ನಾಟಕ

ಮೋದಿ ನೀಡಿದ ಅನುದಾನ ನಿಮ್ಮ ಗ್ರಾಮಗಳಿಗೆ ತಲುಪಿದೆಯಾ? ಅಮಿತ್ ಶಾ

Pinterest LinkedIn Tumblr


ಚಿತ್ರದುರ್ಗ: ಯುಪಿಎಗಿಂತ ಹೆಚ್ಚು ಅನುದಾನವನ್ನು ಬಿಜೆಪಿ ಕರ್ನಾಟಕಕ್ಕೆ ನೀಡಿದೆ. ಈ ಹಣ ನಿಮ್ಮ ಗ್ರಾಮಗಳಿಗೆ ಬಂದಿದೆಯಾ? ಪ್ರಧಾನಿ ಮೋದಿಯವರು ಕಳುಹಿಸಿದ ಹಣ ಎಲ್ಲಿಗೆ ಹೋಗಿದೆ ಎಂದು ಕೇಳಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕಕ್ಕೆ 88,583 ಕೋಟಿ ರೂ ಅನುದಾನ ನೀಡಿದ್ದರೆ, ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ 2,19, 5006 ಕೋಟಿ ರೂ. ಅನುದಾನ ನೀಡಿರುವುದಾಗಿ ವಿವರಿಸಿದರು.

ಪ್ರಧಾನಿ ಮೋದಿಜೀಯವರು ನೀಡಿದ ಅನುದಾನ ಎಲ್ಲಿಗೆ ಹೋಯ್ತು? ಆ ದುಡ್ಡು ಎಲ್ಲಿಗೆ ಹೋಯ್ತು ಅಂತ ನಾನು ಹೇಳಲಾ? ಆ ಹಣವನ್ನು ಕಾಂಗ್ರೆಸ್ ಪಕ್ಷದವರು ತಿಂದು ಹಾಕಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರದಿಂದಾಗಿ ಕರ್ನಾಟಕದಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ ಎಂದು ದೂರಿದರು.

-ಉದಯವಾಣಿ

Comments are closed.