
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗೆ ಹೊಡೆದು, ಹೊರ ಬಂದ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ ಲಂಕಾದ ಬೀಚ್‌ನಲ್ಲಿ ಕಸರತ್ತು ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ.
ಅನೇಕ ದಿನಗಳ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೆ ಆ್ಯಕ್ಟಿವ್ ಆದ ಸಂಯುಕ್ತಾ, ‘ಮುಂಚಿಗಿಂತಲೂ ಉತ್ತಮಳಾಗಿ, ಸ್ಟ್ರಾಂಗ್ ಆಗಿ ಸಾಮಾಜಿಕ ಜಾಲತಾಣಕ್ಕೆ ಮರಳಿದ್ದೇನೆ,’ ಎಂದು ನಾಲ್ಕು ದಿನಗಳ ಹಿಂದೆಯಷ್ಟೇ ಪೋಸ್ಟ್ ಮಾಡಿದ್ದರು. ಇದೀಗ ಲಂಕಾ ಬೀಚ್‌ನಲ್ಲಿ ಕಸರತ್ತು ಮಾಡುತ್ತಿರುವ ಫೋಟೋಗಳನ್ನು ಹಾಕಿದ್ದಾರೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಸಂಯುಕ್ತಾ, ಸಹ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿ, ಮನೆಯಿಂದ ಹೊರ ಬಂದಿದ್ದರು.
Comments are closed.