
ಬೀಜಿಂಗ್: ಚೀನಾದಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ, ಅದರ ಮೇಲೆ ತೆಳುಪದರದ ಕಾಂಕ್ರೀಟ್ ಹಾಕಿ, ಸೌರವಿದ್ಯುತ್ ಉತ್ಪಾದಿಸುವ ಹೆದ್ದಾರಿಯನ್ನೇ ನಿರ್ವಿುಸಲಾಗಿದೆ!
ಅಂದಾಜು 5,875 ಚದರ ಮೀಟರ್ (63,238 ಚದರಡಿ) ಅಗಲವಾಗಿ ಸೌರಫಲಕಗಳನ್ನು ಅಳವಡಿಸಲಾಗಿದೆ. ಅದರ ಮೇಲೆ ಒಂದು ತುರ್ತು ನಿರ್ಗಮನ ರಸ್ತೆ ಸೇರಿ ದ್ವಿಪಥದ ಹೆದ್ದಾರಿ ನಿರ್ವಿುಸಲಾಗಿದೆ. ಪೂರ್ವ ಚೀನಾದ ಶಾಂಡಾಂಗ್ ಪ್ರಾಂತ್ಯದ ಜಿನಾಂಗ್ನಲ್ಲಿ ಇಂತಹ ರಸ್ತೆ ನಿರ್ವಣಗೊಂಡಿದೆ. ವಾರ್ಷಿಕ 1 ಕೋಟಿ ಕಿ.ವಾಟ್ ವಿದ್ಯುತ್ ಉತ್ಪಾದಿಸಬಹುದು.
ವಾಹನಗಳಿಗೂ ಚಾರ್ಜ್
ಸೌರವಿದ್ಯುತ್ ಹೆದ್ದಾರಿಯು ಸಾಮಾನ್ಯ ವೈಟ್ಟಾಪಿಂಗ್ ರಸ್ತೆಗಳಿಗಿಂತಲೂ 10 ಪಟ್ಟು ಹೆಚ್ಚಿನ ಒತ್ತಡವನ್ನು ನಿಭಾಯಿಸಬಲ್ಲವು. ಮುಂಬರುವ ದಿನಗಳಲ್ಲಿ ಸೌರ ವಿದ್ಯುತ್ ಮಾರ್ಗದಲ್ಲಿ ಸಂಚರಿಸುವ ವಿದ್ಯುತ್ ಆಧಾರಿತ ವಾಹನಗಳಿಗೆ ಸ್ವಯಂಚಾಲಿತವಾಗಿ ವಿದ್ಯುತ್ ಮರುಪೂರಣ ಮಾಡುವಂತೆ ಮಾಡಲಾಗುವುದು. ಆದ್ದರಿಂದ, ಸೌರ ವಿದ್ಯುತ್ ಹೆದ್ದಾರಿ ನಿರ್ಮಾಣ ಕಾರ್ಯ ದಲ್ಲಿ ಅತ್ಯಾಧುನಿಕ ಸೋಲಾರ್ ಪ್ಯಾನೆಲ್ಗಳನ್ನೇ ಬಳಸಲಾಗಿದೆ ಎಂದು ಕ್ಸು ಚುನ್ಫು ತಿಳಿಸಿದ್ದಾರೆ.
Comments are closed.