ಕ್ರೀಡೆ

ವಿರಾಟ್ ಕೊಹ್ಲಿ ತನ್ನ ಬ್ಯಾಟಿಗೆ ಅಂಟಿಸಿದ ಸ್ಟಿಕ್ಕರ್ ನಿಂದ ಬರುವ ಆದಾಯ ಕೇಳಿದ್ರೆ ನೀವು ಶಾಕ್ ಆಗ್ತೀರಿ…!

Pinterest LinkedIn Tumblr

ನವದೆಹಲಿ: ವಿರಾಟ್ ಕೊಹ್ಲಿ ಪ್ರಸಕ್ತ ಜಾಹೀರಾತು ಮಾರುಕಟ್ಟೆಯಲ್ಲಿ ಗೆಲ್ಲುವ ಕುದುರೆ. ಇಂತಿಪ್ಪ ಕೊಹ್ಲಿ ಕೇವಲ ತಮ್ಮ ಬ್ಯಾಟಿಗೆ ಅಂಡಿಸಿ ಸ್ಟಿಕ್ಕರ್ ನಿಂದ ಎಷ್ಟೊಂದು ಆದಾಯ ಜೇಬಿಗಿಳಿಸುತ್ತಾರೆ ಗೊತ್ತಾ?!

ಕೇಳಿದರೆ ಶಾಕ್ ಆಗುತ್ತೀರಿ! ಕೊಹ್ಲಿ ತಮ್ಮ ಬ್ಯಾಟ್ ಮೇಲೆ ಎಂಆರ್ ಎಫ್ ಸಂಸ್ಥೆಯ ಸ್ಟಿಕ್ಕರ್ ಅಂಟಿಸುತ್ತಾರೆ. ಒಂದು ಕಾಲದಲ್ಲಿ ಸಚಿನ್ ತೆಂಡುಲ್ಕರ್ ಕೂಡಾ ಇದೇ ಸಂಸ್ಥೆಯ ಸ್ಟಿಕ್ಕರ್ ಅಂಟಿಸುತ್ತಿದ್ದರು.

ಈ ಒಂದು ಸ್ಟಿಕ್ಕರ್ ನಿಂದ ಕೊಹ್ಲಿ 100 ಕೋಟಿ ಕಮಾಯಿ ಮಾಡುತ್ತಾರೆ! ಇದಕ್ಕಾಗಿ ಸಂಸ್ಥೆ ಜತೆಗೆ ಕೊಹ್ಲಿ 8 ವರ್ಷಗಳಿಗೆ 100 ಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಂದರೆ ಇನ್ನು ಎಂಟು ವರ್ಷಗಳಿಗೆ ಕೊಹ್ಲಿ ಬ್ಯಾಟ್ ಮೇಲೆ ಎಂಆರ್ ಎಫ್ ಎಂಬ ಸ್ಟಿಕ್ಕರ್ ಗ್ಯಾರಂಟಿ!

Comments are closed.