ಕರ್ನಾಟಕ

‘ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು’; ಬೆಳಗರೆ ಬಾಂಬ್‌!

Pinterest LinkedIn Tumblr


ಬೆಂಗಳೂರು: ಸಹೋದ್ಯೋಗಿ ಸುನಿಲ್‌ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 3 ದಿನಗಳ ಮಧ್ಯಾಂತರ ಜಾಮೀನಿನ ಮೇಲೆ ಬಿಡಗುಡೆಯಾಗಿರುವ ರವಿ ಬೆಳಗರೆ ಅವರು ಜೈಲಿನಲ್ಲಿರುವಾಗಲೇ ತಮ್ಮ ಹಾಯ್‌ ಬೆಂಗಳೂರು ಪತ್ರಿಕೆಗೆ ರಹಸ್ಯಗಳಿಂದ ಕೂಡಿರುವ ಲೇಖನವೊಂದನ್ನು ಬರೆದಿದ್ದಾರೆ.

ಈ ವಾರದ ಸಂಚಿಕೆಯಲ್ಲಿ ಲೇಖನ ಪ್ರಕಟವಾಗಿದ್ದು,’ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು’ ಎಂಬ ತಲೆ ಬರಹವಿದ್ದರೆ ‘ನೋಟ್ಸ್‌ ಫ್ರಮ್‌ ಸೆಂಟ್ರಲ್‌ ಜೈಲ್‌’ ಎಂಬ ಅಡಿ ಬರಹದೊಂದಿಗೆ ಬರೆಯಲಾಗಿದೆ.

ಇದು ಸುನಿಲ್‌ ಹೆಗ್ಗರವಳ್ಳಿ, ಪೊಲೀಸ್‌ ಅಧಿಕಾರಿಯೊಬ್ಬರು ಹಣೆದ ಬಲೆ ಎಂದು ಬರೆದಿರುವ ಬಗ್ಗೆ ವರದಿಯಾಗಿದ್ದು, ಪತ್ರಿಕೆಯ ಕುರಿತು ಇದೀಗ ಕುತೂಹಲ ಹೆಚ್ಚಾಗಿದ್ದು ಮಾರುಕಟ್ಟೆಗೆ ಬಂದೊಡನೆಯೇ ಬಿಸಿ ದೋಸೆಯಂತೆ ಮಾರಾಟವಾಗುವ ಸಾಧ್ಯತೆಗಳಿವೆ.

ರವಿ ಬೆಳಗರೆಗೆ ನ್ಯಾಯಾಲಯ ಮೂರು ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, ಶನಿವಾರ ಮತ್ತೂಮ್ಮೆ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.

-ಉದಯವಾಣಿ

Comments are closed.