
ಕಣ್ಣೂರು: ರೋಗಿಗಳನ್ನು ಸಾಗಿಸುವ ಬದಲು ಆ್ಯಂಬುಲೆನ್ಸ್‌ನಲ್ಲಿ ಜನರೇಟರ್, ಪಕ್ಷದ ಬ್ಯಾನರ್ ಸಾಗಿಸಿದ ಸಿಪಿಐ(ಎಂ) ಕೇರಳದಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ.
ಆ್ಯಂಬುಲೆನ್ಸ್‌ನಲ್ಲಿ ರೋಗಿ ಬದಲು ರಾಜಕೀಯಕ್ಕೆ ಸಂಬಂಧಿಸಿದಂತೆ ವಸ್ತುಗಳನ್ನು ಸಾಗಿಸುತ್ತಿರುವ ವೀಡಿಯೋ ವಿಜಯ ಕರ್ನಾಟಕದ ಸೋದರ ಸಂಸ್ಥೆ ಟೈಮ್ಸ್ ನೌಗೆ ಲಭ್ಯವಾಗಿದ್ದು, ಪಕ್ಷ ಕಣ್ಣೂರಿನಲ್ಲಿ ಹಮ್ಮಿ ಕೊಂಡಿದ್ದ ಬೈಕ್ ರ‍್ಯಾಲಿಗಾಗಿ ಆ್ಯಂಬುಲೆನ್ಸ್‌ನಲ್ಲಿ ಜನರೇಟರ್, ಬ್ಯಾನರ್ ಸಾಗಿಸಲಾಗಿದೆ.
ವೈದ್ಯಕೀಯ ತುರ್ತು ಹೊರತುಪಡಿಸಿ, ಬೇರೆ ಯಾವುದೇ ಕಾರಣಗಳಿಗಾಗಿ ಆ್ಯಂಬುಲೆನ್ಸ್ ಬಳಸುವುದನ್ನು ನಿರ್ಬಂಧಿಸಲಾಗಿದೆ.
ಕೇರಳದ ಸಿಪಿಐಎಂ ನೇತೃತ್ವದ ಎಲ್‌ಡಿಎಫ್ ಸರಕಾರ ರಾಜಕೀಯ ಕಾರಣಗಳಿಗಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ, ಎಂದು ಕೇರಳ ಬಿಜೆಪಿ ಮುಖಂಡ ಮುರಳೀಧರನ್ ಆರೋಪಿಸದ್ದಾರೆ.
Comments are closed.