ಕರ್ನಾಟಕ

ಇಟಲಿಯ ದ್ರಾಕ್ಷಿ ತೋಟದ ನಡುವೆ ಕೋಹ್ಲಿ -ಅನುಷ್ಕಾ ಮದುವೆಯಾಗಿದ್ದೇಕೆ?

Pinterest LinkedIn Tumblr


ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಆ ಮೂಲಕ ಇದುವರೆಗೂ ಅವರ ಮದುವೆ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಅಷ್ಟಕ್ಕೂ ಈ ಸೂಪರ್ ಜೋಡಿ ಕೆಲವೇ ಕೆಲವು ಮಂದಿ ಸಮ್ಮುಖದಲ್ಲಿ ಇಟಲಿಯ ದ್ರಾಕ್ಷಿ ತೋಟದ ಮಧ್ಯೆ ಮದುವೆಯಾಗಿದ್ದು ಏಕೆ?

‘ದ್ರಾಕ್ಷಿ ತೋಟದ ಮಧ್ಯೆ, ಸಾಂಪ್ರಾದಾಯಿಕವಾಗಿ ಮದುವೆಯಾಗಬೇಕೆಂಬುವುದು ನನ್ನ ಕನಸು,’ ಎಂದು ಈ ಹಿಂದೆ ಅನುಷ್ಕಾ ಇಂಗ್ಲಿಷ್ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅವರ ಕನಸಿನಂತೆ ಅನುಷ್ಕಾ-ವಿರಾಟ್ ಸಾಂಪ್ರದಾಯಿಕ ಪಂಜಾಬಿ ಶೈಲಿಯಲ್ಲಿ, ನಿಸರ್ಗದ ಮಧ್ಯೆ ಇರುವ ರೆಸಾರ್ಟ್‌ವೊಂದರಲ್ಲಿ ನವ ಜೀವನಕ್ಕೆ ಕಾಲಿರಿಸಿದ್ದಾರೆ.

ಕೆಲವೇ ಕೆಲವು ಬಂಧು, ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿರಿಸಿದೆ. ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಮಾತ್ರ ಈ ಬಿಗ್ ವೆಡ್ಡಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದರೆನ್ನಲಾಗಿದೆ.

ಎಲ್ಲಿದೆ ಈ ರೆಸಾರ್ಟ್?

ದಿ ಬೊರ್ಗೋ ಫಿನೊಚ್ಚಿಟೋ ಎಂಬ ವಿಶ್ವದ ಐಷಾರಾಮಿ ರೆಸಾರ್ಟ್‌ನಲ್ಲಿ ಒಂದಾದ ಇಲ್ಲಿ ಕೇವಲ 44 ಮಂದಿ ಇರಬಹುದಾದ 22 ಕೊಠಡಿಗಳಿವೆ. ಇದನ್ನು 2001ರಲ್ಲಿ ಅಮೆರಿಕದ ಮಾಜಿ ರಾಯಭಾರಿ ಜಾನ್ ಫಿಲಿಪ್ಸ್ ಖರೀದಿಸಿದ್ದಾರೆನ್ನಲಾಗಿದೆ. 13ನೇ ಶತಮಾನದ ಬ್ಯುಂಕೋನ್ವೆಟೋ‌ವಿನ ಸಣ್ಣ ಹಳ್ಳಿಯಲ್ಲಿರುವ ಈ ರೆಸಾರ್ಟ್ ದಕ್ಷಿಣ ಸಿಯಾನಾದ 35 ಕಿ.ಮೀ. ದೂರದಲ್ಲಿದೆ.

ಐದು ವಿಲ್ಲಾಗಳಿರುವ ಪೂರ್ತಿ ರೆಸಾರ್ಟ್‌ ಅನ್ನು ಬುಕ್ ಮಾಡಿದರೆ ವಾರಕ್ಕೆ 83,54,868 ರೂ. ಬಾಡಿಗೆ. ಡಿಸೆಂಬರ್ 13ರವರೆಗೂ ವಿರುಷ್ಕಾ ಈ ವಿಲ್ಲಾವನ್ನು ಬುಕ್ ಮಾಡಿದ್ದಾರೆನ್ನಲಾಗಿದೆ.

ಈ ರೆಸಾರ್ಟ್‌ಗೆ ಕಳೆದ ಮೇನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾನ ಸಹ ಭೇಟಿ ನೀಡಿದ್ದರು.

Comments are closed.