ಕರ್ನಾಟಕ

ರವಿ ಬೆಳಗೆರೆ ಈಗ ಕೈದಿ ನಂಬರ್ 12875; ಜೈಲಿನಲ್ಲೂ ಕಿರಿಕ್

Pinterest LinkedIn Tumblr


ಬೆಂಗಳೂರು: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಮಾನ್ಯ ಕೊಠಡಿ ನೀಡಲು ಜೈಲಿನ ಹಿರಿಯ ಅಧಿಕಾರಿಗಳು ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ತೀವ್ರ ತರದ ಅನಾರೋಗ್ಯದಿಂದ ನರಳುತ್ತಿರುವ ರವಿ ಬೆಳಗೆರೆಯವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು 1ನೇ ಎಸಿಎಂಎಂ ಕೋರ್ಟ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿತ್ತು,

ಜೈಲಿನೊಳಗೆ ರವಿ ಹೈಡ್ರಾಮಾ:

ರವಿ ಬೆಳಗೆರೆಗೆ ವೈದ್ಯರು ತಪಾಸಣೆ ನಡೆಸಿದ ವೇಳೆಯಲ್ಲಿ ತಪಾಸಣೆ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ. ಅಷ್ಟೇ ಅಲ್ಲ ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಸಿಬ್ಬಂದಿ ಊಟ ನೀಡಲು ಬಂದಾಗಲೂ ತನಗೆ ಊಟ ಬೇಡವೆಂದ ಹಠ ಹಿಡಿದಿದ್ದರು, ನನಗೆ ಮನೆ ಊಟವೇ ಬೇಕು ಎಂದು ಹೇಳಿದ್ದಾರೆ. ಕೊನೆಗೆ ಕಾಳುಸಾರು, 1ರಾಗಿ ಮುದ್ದೆ ಹಾಗೂ ಸ್ವಲ್ಪ ಊಟ ಮಾಡಿದ್ದಾರೆ ಎಂದು ವರದಿ ವಿವರಿಸಿದೆ.

ರಕ್ಷಣೆ ಕೊಡಿ ಎಂದು ಸಿಎಂಗೆ ಹೆಗ್ಗರವಳ್ಳಿ ಮನವಿ:

ರವಿ ಬೆಳಗೆರೆಯವರು ಜೈಲಿನಲ್ಲಿದ್ದರೂ ಕೂಡಾ ಅವರು ತುಂಬಾ ಪ್ರಭಾವಿಯಾಗಿದ್ದಾರೆ. ಭೂಗತ ಲೋಕದ ಸಂಪರ್ಕ ಇರುವುದರಿಂದ ತನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ನನ್ನ ಪತ್ನಿ, ತಂದೆ, ತಾಯಿ ಇದ್ದು ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹೆಗ್ಗರವಳ್ಳಿ ಅವರು ಮನವಿ ನೀಡಿದ್ದಾರೆ. ಇಂಟೆಲಿಜೆನ್ಸ್ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

-ಉದಯವಾಣಿ

Comments are closed.