ಕರ್ನಾಟಕ

ದತ್ತಪೀಠದಲ್ಲಿ ಪೆಟ್ರೋಲ್‌ ಬಾಂಬ್‌: 13 ಮಂದಿ ವಶಕ್ಕೆ

Pinterest LinkedIn Tumblr


ಚಿಕ್ಕಮಗಳೂರು: ದತ್ತಪೀಠದಲ್ಲಿ ಹನುಮಜಯಂತಿ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಜನರನ್ನು ವಶಕ್ಕೆ ಪಡೆದುಕೊಂಡು ನಾಲ್ಕು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಅಣ್ಣಾಮಲೈ ಹೇಳಿದ್ದಾರೆ. ಸಾರಾಯಿ ಬಾಟಲ್ ನಲ್ಲಿ ಪೆಟ್ರೋಲ್ ಹಾಗೂ ಬಟ್ಟೆ ಸುತ್ತಿ ತಯಾರಿಸಿದ್ದ ಐದು ಪೆಟ್ರೋಲ್ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿದ್ದಾರೆ.

ತಮಿಳು ಕಾಲೊನಿಯಲ್ಲಿ 15 ರಿಂದ 18 ವಯಸ್ಸಿನ ಹುಡುಗರು ಈ ಕೃತ್ಯ ಎಸಗಿದ್ದಾರೆ. ರಷ್ಯಾ ದೇಶದಲ್ಲಿ ಬಳಸುವ ಮಾದರಿಯಲ್ಲಿರುವ ಈ ಪೆಟ್ರೋಲ್ ಬಾಂಬ್ ತಯಾರಾಗಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಾಗಿ ಇದನ್ನು ಬಳಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಟ್ವೀಟ್‌ಗೆ ಪ್ರತಿಕ್ರಿಯಿಸಿ, ನಾವು ಎರಡು ಧರ್ಮದವರಿಗೂ ಸಮನಾದ ಭದ್ರತೆ ನೀಡುತ್ತೇವೆ. ರಾಜಕಾರಣಿಗಳು ಪ್ರತಿಕ್ರಿಯೆ ನೀಡುವುದು ಸಾಮಾನ್ಯ. ಕೆಲಸ ಮಾಡುವುದೇ ನಮ್ಮ ಬದ್ಧತೆ. ಕಾನೂನು ಎಲ್ಲರಿಗೂ ಒಂದೇ ಎಂದರು.

Comments are closed.