
ಕೋಲಾರ: ಕಳೆದ ರಾತ್ರಿ ಕೋಲಾರದಲ್ಲಿ ಅಕಾಲಿಕ ಮಳೆಯಾಗಿದ್ದು ಮಳೆ ನೀರಿನಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಕೊಚ್ಚಿಹೋಗಿರುವ ಘಟನೆ ನಡೆದಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆಯ ಬಲಮಂದೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದರೆ ಇನ್ನೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಮಸಮುದ್ರ ಗ್ರಾಮದ ನಿವಾಸಿ ಸುರೇಶ್ (22) ಮೃತಪಟ್ಟಿದ್ದು ಮಸ್ತಾನ್ ಎನ್ನುವ ಇನ್ನೋರ್ವ ಯುವಕ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಇಬ್ಬರೂ ನಿನ್ನೆ ರಾತ್ರಿ ಬೈಕಿನಲ್ಲಿ ತಮ್ಮ ಗ್ರಾಮದತ್ತ ತೆರಳುತ್ತಿದ್ದರು.
ಮಳೆ ಜೋರಾಗಿದ್ದರೂ ಅದೇ ನೀರಿನಲ್ಲಿ ಬೈಕ್ ಚಲಾಯಿಸುತ್ತಿದ್ದ ಸುರೇಶ್ ರಸ್ತೆಯಲ್ಲಿ ಆಯತಪ್ಪಿ ಬಿದ್ದಿದ್ದರು. ಹಾಗೆ ಬಿದ್ದ ನಂತರ ನೀರಿನ ರಭಸಕ್ಕೆ ಸಿಲುಕಿ ಪಕ್ಕದ ಹಳ್ಳಕ್ಕೆ ಸೆಳೆಯಲ್ಪಟ್ತು ಕೊಚ್ಚಿ ಹೋಗಿದ್ದಾರೆ. ಹಿಂಬದಿ ಸವಾರ ಮಸ್ತಾನ್ ಗಾಯಗೊಂಡಿದ್ದು ಗ್ರಾಮಸ್ತರಿಗೆ ವಿಚಾರ ತಿಳಿಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಕಾಮಸಮುದ್ರ ಪೋಲೀಸರು ಗಿಡವೊಂದರ ಬಳಿ ಪತ್ತೆಯಾದ ಸುರೇಶ್ ಮೃತದೇಹವನ್ನು ಪರಿಶೀಲನೆ ನಡೆಸಿದರಲ್ಲದೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.