ಕರ್ನಾಟಕ

ಬಾಲಕನ ಜತೆ ಪರಾರಿಯಾದ ಗೃಹಿಣಿ ಮೇಲೆ ಅತ್ಯಾಚಾರ ಪ್ರಕರಣ ದಾಖಲು

Pinterest LinkedIn Tumblr


ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕನ ಜತೆ ಪರಾರಿಯಾಗಿದ್ದ ಗೃಹಿಣಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ರಾಜಧಾನಿ ಬೆಂಗಳೂರಿಗೆ 95 ಕಿಲೋ ಮೀಟರ್‌ ದೂರದ ಕೆಜಿಎಫ್‌ನಲ್ಲಿ 24 ವರ್ಷದ ಗೃಹಿಣಿಯೊಬ್ಬರು 17 ವರ್ಷದ ಬಾಲಕನ ಜತೆ ಪರಾರಿಯಾಗಿದ್ದರು. ಅಲ್ಲದೇ ಆತನೊಂದಿಗೆ ದೈಹಿಕ ಸಂಪರ್ಕ ಕೂಡ ಹೊಂದಿದ್ದರು.

ಈಗ ಮಹಿಳೆಯ ಮೇಲೆ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ಪ್ರಕಾರ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಕೆಜಿಎಫ್‌ನಲ್ಲಿರುವ ಈಕೆ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ಪತಿ ಕುಡಿಯುವ ನೀರಿನ ಪೂರೈಕೆ ಮಾಡುವ ವ್ಯಾಪಾರ ಮಾಡುತ್ತಿದ್ದರು. ಇವರು ವಾಸಿಸುತ್ತಿದ್ದ ಬಡಾವಣೆಯಲ್ಲೇ ಸ್ಕೂಲ್‌ ಡ್ರಾಪ್‌ ಔಟ್‌ ಆಗಿದ್ದ ಬಾಲಕನ ಜತೆ ಮೋಹ ಬೆಳೆಸಿಕೊಂಡಿದ್ದ ಈಕೆ ಆತನೊಂದಿಗೆ ಕಳೆದ ಅಕ್ಟೋಬರ್‌ 24 ರಂದು ಪರಾರಿಯಾಗಿದ್ದರು.

ಈಕೆಯ ಪತಿ ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ತನ್ನ ಪತ್ನಿ 1.5 ಲಕ್ಷ ರೂಪಾಯಿ ಎತ್ತಿಕೊಂಡು ಹೋಗಿದ್ದಾಳೆ ಎಂದೂ ಪತಿ ದೂರು ಸಲ್ಲಿಸಿದ್ದಾನೆ. ಬಾಲಕನ ತಂದೆ ಕೂಡ ಇದೇ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ನಂತರ ತನಿಖೆ ಆರಂಭಿಸಿದ ಪೊಲೀಸರು ಕೆಜಿಎಫ್‌ ಬಸ್‌ ನಿಲ್ದಾಣದ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ಮಾಡಿದಾಗ ಇಬ್ಬರೂ ಆಂಧ್ರಪ್ರದೇಶ ಬಸ್‌ ಹತ್ತಿದ್ದು ಪತ್ತೆಯಾಯಿತು.

ಇಬ್ಬರೂ ವಿಶಾಖಪಟ್ಟಣ, ವಿಜಯವಾಡ, ನೆಲ್ಲೂರು ಹಾಗೂ ಇತರೆ ಪ್ರದೇಶಗಳಲ್ಲಿ ತೆರಳಿ ಲಾಡ್ಜ್‌ನಲ್ಲಿ ತಂಗಿದ್ದರು. ಕೊನೆಗೆ ನವೆಂಬರ್‌ 13ರಂದು ವೇಲಾಂಕಣಿಯಲ್ಲಿ ಇಬ್ಬರೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಯುವಕನ ಜತೆ ಪ್ರೇಮಾಂಕುರವಾಗಿದೆ. ಆತನನ್ನೇ ಮದುವೆಯಾಗುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Comments are closed.